ಚಿತ್ರದುರ್ಗ: ಮೆದೇಹಳ್ಳಿ ಗ್ರಾಪಂ ಗುರುತಿಸಿದ್ದ ನೂರು ಬಡ ಕುಟುಂಬಗಳಿಗೆ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಹಾರದ ಕಿಟ್ ಹಾಗೂ ಮಾಸ್ಕ್‌ಗಳನ್ನು ಗುರುವಾರ ವಿತರಿಸಲಾಯಿತು.
ಕಿಟ್ ವಿತರಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಕಷ್ಟದ ಸಮಯದಲ್ಲಿ ಇದ್ದಂಥವರು ಇಲ್ಲದವರಿಗೆ ನೆರವಾಗಬೇಕು. ಸರ್ಕಾರಗಳ ಜತೆ ಸಂಘ-ಸಂಸ್ಥೆಗಳು ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.
ಸಂಘದ ಗೌರವಾಧ್ಯಕ್ಷ ಜೆ.ಪರುಶುರಾಮ ರೆಡ್ಡಿ, ಪ್ರಮುಖರಾದ ಜ್ಞಾನಮೂರ್ತಿ, ಜಯಪ್ರಕಾಶ್, ಪ್ರತಾಪ್‌ರೆಡ್ಡಿ, ವಿದ್ಯಾನಂದ, ಎಂ.ಪಿ.ಶಂಕರ್,ವೀರೇಶ್,ಡಾ. ಹರಿಣಿ, ಮಂಜುನಾಥ್, ಕೃಷ್ಣರೆಡ್ಡಿ, ವೈ.ಸುರೇಶ್, ಗ್ರಾಪಂ ಪಿಡಿಒ ಸಂತೋಷ್,ನಗರ ಠಾಣೆ ಪಿಐ ನಯೀಂ ಅಹಮದ್ ಮತ್ತಿತರರು ಇದ್ದರು.
ಆಹಾರ ಧಾನ್ಯ ಕಿಟ್ ವಿತರಣೆ: ಮೆದೇಹಳ್ಳಿ ರಸ್ತೆಯ ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಸುಡುಗಾಡು ಸಿದ್ದರು, ಬುಡುಗ ಜಂಗಮ ಸಮುದಾಯದ ನೂರು ಕುಟುಂಬಗಳಿಗೆ ಎಸ್‌ಬಿಐ, ಎಪಿಎಂಸಿ ಯಾರ್ಡ್, ವಿಪಿ ಬಡಾವಣೆ, ಪ್ರಶಾಂತ ನಗರ ಶಾಖೆಗಳಿಂದ ಗುರುವಾರ ಆಹಾರಧಾನ್ಯ ವಿತರಿಸಲಾಯಿತು.
ಎಎಸ್ಪಿ ಎಂ.ಬಿ.ನಂದಗಾವಿ, ಎಪಿಎಂಸಿ ಎಸ್‌ಬಿಐ ಮುಖ್ಯವ್ಯವಸ್ಥಾಪಕ ರಾಮು ಮಾಚಿ, ಪ್ರಶಾಂತ ನಗರ ಶಾಖೆ ವ್ಯವಸ್ಥಾಪಕ ಎಂ.ರಮೇಶ್,ವಿ.ಪಿ.ಬಡಾವಣೆ ಶಾಖೆ ವ್ಯವಸ್ಥಾಪಕ ನವೀನ್ ಕುಮಾರ್, ಗಣಪತಿ ಪೋಕಳೆ, ಮಂಜುನಾಥ, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಉಮೇಶ್ ಭಂಡಾರಿ, ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್,ಅಲೆಮಾರಿ, ಅರೆಅಲೆಮಾರಿ ಮಹಾಸಭಾದ ಅಧ್ಯಕ್ಷ ನಾಗರಾಜ,ಬಾಬು,ವಸಂತ ಮತ್ತಿತರರು ಇದ್ದರು.
ಮಹಿಳಾ ಸಮಾಜ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಿಳಾ ಸಮಾಜದಿಂದ ಗುರುವಾರ 2ನೇ ಬಾರಿ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಎಡಿಸಿ ಸಿ.ಸಂಗಪ್ಪ, ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ,ಕಾರ್ಯ ದರ್ಶಿ ಲತಾ ಉಮೇಶ್, ವಿಜಯಾ ಸುನೀಲ್, ಅನ್ನಪೂರ್ಣ ಸಜ್ಜನ್, ಮಹಾಂತಮ್ಮ,ರೂಪಾ ಜನಾರ್ಧನ್, ಕುಡಾ ಆಯುಕ್ತ ಸೋಮಶೇಖರ್,ಪವನ್ ಮತ್ತಿತರರು ಇದ್ದರು.
ಜಾಗೃತಿ ಕಾರ್ಯಕ್ರಮ: ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದಿಂದ ಗುರುವಾರ ಜನರಿಗೆ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ಕೊರನಾ ವೈರಸ್ ನಿರ್ಮೂಲನೆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಸಮಾಜದ ಅಧ್ಯಕ್ಷ ಚಿದಾನಂದಪ್ಪ,ಉಪಾಧ್ಯಕ್ಷ ಎನ್.ಬಿ.ವಿಶ್ವನಾಥ್,ಕಾರ್ಯದರ್ಶಿ ರವೀಂದ್ರ,ಸಹ ಕಾರ್ಯದರ್ಶಿ ಸತೀಶ್,ವಿಜಯಣ್ಣ,ಶಿವಾನಂದ್ ಮತ್ತಿತರರು ಇದ್ದರು.