ಜಿಲ್ಲೆ

ಜಿಲ್ಲಾಸ್ಪತ್ರೆಗೆ ಪಿಪಿಇ ಕಿಟ್ ವಿತರಣೆ

Chitradurga

ಚಿತ್ರದುರ್ಗ; ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಲಾಕ್‌ಡೌನ್ ಕಟ್ಟುನಿಟ್ಟಿನಿಂದ ಜಾರಿಯಾಗಿದ್ದರಿಂದಾಗಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರ ಣವಾಗಿ ಹಸಿರು ವಲಯದಲ್ಲಿದೆ ಎಂದು ಬೆಂಗಳೂರಿನ ವೈದ್ಯ ಡಾ.ಜಿ.ಸಿದ್ದಾರ್ಥ ಹೇಳಿದರು.

ಬೆಂಗಳೂರಿನ ವೈದ್ಯ ಡಾ.ಶ್ರೀನಾಥ್ ಮತ್ತು ಉದ್ಯಮಿ ಕೆ.ಜಿ.ಪಾಪಣ್ಣೆರೆಡ್ಡಿ, ಜಿಲ್ಲಾಸ್ಪತ್ರೆ ವೈದ್ಯ, ಸಿಬ್ಬಂದಿಗೆ ಶನಿವಾರ ಪಿಪಿಇ ಕಿಟ್ ಹಾಗೂ ಮಾಸ್ಕ್ ವಿತರಿಸಿ ಮಾತನಾಡಿ, ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಸುರಕ್ಷಿತೆ ಮುಖ್ಯವೆಂದರು.

ಡಾ. ಶ್ರೀನಾಥ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ಬಿ.ಶ್ರೀರಾಮುಲು ಮುತುವರ್ಜಿಯಿಂದ ರಾಜ್ಯದಲ್ಲಿ ಕೊರನಾ ನಿಯಂತ್ರಣದಲ್ಲಿದೆ.

ಈ ರೋಗದ ಬಗ್ಗೆ ಗಾಬರಿ ಬೇಡ. ಆದರೆ ಎಚ್ಚರಿಕೆ ಅಗತ್ಯ. ರೋಗ ಲಕ್ಷಣ ಇರುವಂಥವರು ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.

ಚಿತ್ರದುರ್ಗದ ಸಂತ ಜೋಸೆಫ್ ಕಾನ್ವೆಂಟ್ ಶಾಲೆಯ 1987 ನೇ ಬ್ಯಾಚ್ ವಿದ್ಯಾರ್ಥಿಗಳು ಪಿಪಿಇ ಕಿಟ್‌ಗಳ ಕೊಡುಗೆ ನೀಡಿದ್ದಾರೆ. ದಾನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದರು.

ಡಿಎಸ್ ಡಾ.ಎಚ್.ಜೆ.ಬಸವರಾಜ್ ಮತ್ತಿತರರು ಇದ್ದರು.