ಜಿಲ್ಲೆ

ಜನತಾ ಕರ್ಪ್ಯೂವಿಗೆ ಸಂಘ-ಸಂಸ್ಥೆಗಳ ಬೆಂಬಲ

Chitradurga

ಚಿತ್ರದುರ್ಗ: ಪ್ರಧಾನಿ ಕರೆಯಂತೆ ಭಾನುವಾರದ ಜನತಾ ಕರ್ಫ್ಯೂವಿಗೆ ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪ ಹಾಗೂ ಭಾರತ್ ಸ್ವಾಭಿಮಾನ ಟ್ರಸ್ಟ್ ಬೆಂಬಲ ಸೂಚಿಸಿದೆ. ಭಾನುವಾರ ಪತಂಜಲಿ ಯೋಗ ಸಮಿತಿ ಎಲ್ಲ ಯೋಗ ಶಾಖೆಗಳನ್ನು ಸ್ಥಗಿತ ಗೊಳಿಸಲಾಗುವುದು.

ಸಂಜೆ 5ಕ್ಕೆ ಎಲ್ಲ ಯೋಗ ಬಂಧುಗಳು ಚಪ್ಪಾಳೆ ತಟ್ಟುವ ಮೂಲಕ ವೈದ್ಯರ ಸಹಿತ ವೈರಸ್ ವಿರುದ್ಧ ಸಮರೋಪಾದಿ ಕೆಲಸ ಮಾಡುತ್ತಿರುವ ಎಲ್ಲರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಸಂಸ್ಥೆ ರವಿ ಕೆ.ಅಂಬೇಕರ್ ಮನವಿ ಮಾಡಿದ್ದಾರೆ.