ಜಿಲ್ಲೆ

ಅಂತರ್ಜಲ ಚೇತನದಡಿ ಕಾಮಗಾರಿ

Chitradurga

ಚಿತ್ರದುರ್ಗ: ಶ್ರೀ ರವಿಶಂಕರ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಂಡಿರುವ ಅಂತರ್ಜಲ ಚೇತನ ಯೋಜನೆ ಕುರಿತಂತೆ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ಜಿಪಂ ಅಧಿಕಾರಿಗಳ ಸಭೆ ನಡೆಯಿತು.

ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ರೂಪಿಸಿರುವ ಕ್ರಿಯಾಯೋಜನೆ ಕುರಿತಂತೆ ಚರ್ಚಿಸಿದ ಶಾಸಕದ್ವಯರು, ತೋಟಗಾರಿಕೆ, ಕೃಷಿ, ಅರಣ್ಯ ಮೊದಲಾದ ಇಲಾಖೆಗಳಿಗೆ ಯೋಜನೆ ಯಶಸ್ವಿಗೊಳಿಸುವ ಕುರಿತಂತೆ ನಾನಾ ಸೂಚನೆಗಳನ್ನು ನೀಡಿದರು.

ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಈ ಯೋಜನೆಗೆ ನರೇಗಾದಡಿ 270 ಕೋಟಿ ರೂ. ಮೀಸಲು ಇಡಲಾಗಿದ್ದು, 46 ಸಾವಿರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಿಇಒ ಎಸ್.ಹೊನ್ನಾಂಬ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವೀಂದ್ರ ದೇಸಾಯಿ ಸೇರಿ ನಾನಾ ಇಲಾಖೆ ಗಳ ಹಿರಿಯ ಅಧಿಕಾರಿಗಳಿದ್ದರು.