ಜಿಲ್ಲೆ

ಸಮಾಜದ ಮುಖ್ಯವಾಹಿನಿಗೆ ಬನ್ನಿ

ಚಿತ್ರದುರ್ಗ: ಸರ್ಕಾರದ ಸೌಲಭ್ಯಗಳನ್ನು ರೈತಸಮುದಾಯ ಸದುಬಳಕೆ ಮಾಡಿಕೊಳ್ಳುವಂತೆ ತಾಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು ತಿಳಿಸಿದರು.

ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜವನ್ನು ಸೋಮವಾರ ವಿತರಿಸಿ ಮಾತನಾಡಿದರು.

ಸರ್ಕಾರ ರೂಪಿಸಿದ ಕಾರ್ಯಕ್ರಮಗಳ ಕುರಿತು ಕೃಷಿ ಇಲಾಖೆಯು ರೈತರಿಗೆ ಅರಿವು ಮೂಡಿಸಬೇಕು. ಹವಾಗುಣ, ಮಣ್ಣಿನ ಫಲವತ್ತತೆ ಆಧರಿಸಿ ಬೆಳೆ ಬೆಳೆಯಲು ಸಲಹೆ ನೀಡಬೇಕು ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಟಿ.ಜಗದೀಶ್ ಮಾತನಾಡಿ, ಬಿತ್ತನೆ ಬೀಜಕ್ಕೆ ಕೊರತೆ ಆಗದಂತೆ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಬೇಕು ಎಂದರು.

ಮಿಡತೆ ಹಾವಳಿ ಬಗ್ಗೆ ಸ್ಥಳೀಯ ಅಧಿಕಾರಿಗಳು ಜಾಗೃತರಾಗಿರಬೇಕು. ಮುನ್ಸೂಚನೆ ಸಿಕ್ಕರೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ತಾಪಂ ಮಾಜಿ ಅಧ್ಯಕ್ಷ ವೇಣುಗೋಪಾಲ್, ಸದಸ್ಯೆ ರಾಧಮ್ಮ ಇತರರಿದ್ದರು.

ಮುಂಗಾರಿಗೆ ಶೇಂಗಾ, ಹೈಬ್ರಿಡ್ ಜೋಳ, ಅಲಸಂದಿ, ಉದ್ದು, ತೊಗರಿ, ಮೆಕ್ಕೆಜೋಳದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಸಣ್ಣ,ಅತೀ ಸಣ್ಣ ರೈತರಿಗೆ ಸಹಾಯಧನದ ಸೌಲಭ್ಯ ಸಿಗಲಿದೆ.
ಭಾರತಿ, ಸಹಾಯಕ ಕೃಷಿ ಅಧಿಕಾರಿ