ಜಿಲ್ಲೆ

ಸಿಎಂ ವಿರುದ್ಧ ಗುಟುರು ಅಪಾಯ

Chitradurga

ಚಿತ್ರದುರ್ಗ: ಹರಿಹರದಲ್ಲಿ ಇತ್ತೀಚೆಗೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಮುಖ್ಯಮಂತ್ರಿ ಯೂಡಿಯೂರಪ್ಪ ಅವರನ್ನು ಅವಮಾನಿಸುವ ರೀತಿ ಮಠಾಧೀಶರು ವರ್ತಿಸಿತ್ತು ಸರಿಯಲ್ಲ ಎಂದು ಸಾಹಿತಿ ಬಿ.ಎಲ್.ವೇಣು ಹೇಳಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಏತಕ್ಕಾಗಿ?ಎಂಬ ವಿಷಯದ ಕುರಿತಂತೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ಮಠಾಧೀಶರು ದಬ್ಬಾಳಿ, ಬೆದರಿಕೆ ಹಾಕುವ ರೀತಿ ವರ್ತಿಸಿದ್ದು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ ಎಂದರು.

ಮಠಾಧೀಪತಿಗಳು ಪ್ರಜಾಪ್ರಭುತ್ವ ರಕ್ಷಣೆಗೆ ಪಣ ತೊಡಬೇಕು. ಆದರೆ, ಸಿಎಎ ವಿರುದ್ಧ ಒಬ್ಬ ಸ್ವಾಮೀಜಿಯೂ ಮಾತನಾಡುತ್ತಿಲ್ಲ ಎಂದು ವೇಣು ಅಸಮಾಧಾನ ವ್ಯಕ್ತಪಡಿಸಿದರು.