ಚಿತ್ರದುರ್ಗ: ನಗರದಲ್ಲಿ ಫೆ.15ರಂದು ಸಂತ ಸೇವಾಲಾಲ್, 19-ಛತ್ರಪತಿ ಶಿವಾಜಿ ಹಾಗೂ 20 ರಂದು ಕವಿ ಸರ್ವಜ್ಞರ ಜಯಂತಿ ಆಚರಿಸುವುದಾಗಿ ಎಡಿಸಿ ಸಿ.ಸಂಗಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮೂವರು ಮಹನೀಯರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆಯಾ ದಿನಗಳಂದು ಮಹನೀಯರ ಭಾವಚಿತ್ರಗಳ ಮೆರವಣಿಗೆ ಹಾಗೂ ತರಾಸು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
15ರಂದು ಸಂತ ಸೇವಾಲಾಲ್ ಜಯಂತಿ ಅಂಗವಾಗಿ ನೀಲಕಂಠೇಶ್ವರ ದೇವಾಲಯದಿಂದ ಬೆಳಗ್ಗೆ 10ಕ್ಕೆ ಮೆರವಣಿಗೆ, ಮಧ್ಯಾಹ್ನ 12ಕ್ಕೆ ವೇದಿಕೆ ಕಾರ್ಯಕ್ರಮವಿದ್ದು ಸಾಹಿತಿ ಮಂಜುನಾಥ್ ನಾಯ್ಕ ಉಪನ್ಯಾಸ ನೀಡಲಿದ್ದಾರೆ. 19ರಂದು ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಬೆಳಗ್ಗೆ 9.30ಕ್ಕೆ ನಗರದ ಏಕನಾಥೇಶ್ವರಿ ಪಾದಗಟ್ಟೆಯಿಂದ ಮೆರವಣಿಗೆ,ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯ ಕ್ರಮವಿರುತ್ತದೆ.
20ರಂದು ಕವಿ ಸರ್ವಜ್ಞ ಜಯಂತಿ ಆಚರಿಸಲಾಗುವುದು. ಬೆಳಗ್ಗೆ 10ಕ್ಕೆ ಗೌರಸಮುದ್ರ ಮಾರಮ್ಮ ದೇವಾಲಯದಿಂದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮಧ್ಯಾಹ್ನ 12ಕ್ಕೆ ಪರಶುರಾಂಪುರದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಹಾಂತೇಶ್ ಉಪನ್ಯಾಸ ನೀಡಲಿದ್ದಾರೆ ಎಂದು ಎಡಿಸಿ ತಿಳಿಸಿದರು.
ಜಿಪಂ ಸದಸ್ಯ ನಾಗೇಂದ್ರನಾಯ್ಕ, ಜಿಲ್ಲಾ ಬಂಜಾರ ಸಮುದಾಯದ ಗೌರವಾಧ್ಯಕ್ಷ ರಾಜಾನಾಯ್ಕ,ಪ್ರಧಾನ ಕಾರ್ಯದರ್ಶಿ ಮಂಜು ನಾಥ್‌ನಾಯ್ಕ,ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ್‌ನಾಯ್ಕ,ಚಿತ್ರದುರ್ಗ ತಾಪಂ ಸದಸ್ಯ ಸುರೇಶ್ ನಾಯ್ಕ,ಮರಾಠ ಸಮಾಜದ ಅಧ್ಯಕ್ಷ ಸುರೇಶ್‌ಜಾಧವ್,ಕಾರ್ಯದರ್ಶಿ ಗೋಪಾಲರಾವ್,ಕುಂಬಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಪ್ಪ, ಕಾರ್ಯದರ್ಶಿ ಮೃತ್ಯುಂಜಯ ಸೇರಿದಂತೆ ಈ ಸಮುದಾಯಗಳ ನಾನಾ ಗಣ್ಯರು ಇದ್ದರು.