ಜಿಲ್ಲೆ

ಕರೊನಾ ಕುರಿತು ಶರಣರು ವಾಚಿಸಿದ ಕವನ

Chitradurga

ಕಂಗೆಡದಿರು ಎಲವೊ ಜೀವ ॥ ಪ ॥

ಹೆದರದಿರು ಆಧುನಿಕ ಮಾನವ

ಜೀವಭಯದಿಂದ ಕುಬ್ಜನಾಗಿ ಕೈಹೊತ್ತು ನೀನು ಕುಳಿತಿರುವೆಯಾ ! ॥ 1 ॥

ಮನೆಯೊಳಗೆ ಮುದ್ದೆಯಂತೆ ಕುಳಿತು ಕಾಲ ನೂಕುತಿರುವೆಯಾ !

ಉದ್ಯೋಗ ವ್ಯಾಪಾರ ಕುಂಠಿತವಾಯಿತೆಂದು ಚಿಂತಿಸಿರುವೆಯಾ !

ಕರೊನಾ ವೈರಸ್‌ನಿಂದ ನೀ ಬಲು ಕಂಗಾಲಾಗಿರುವೆಯಾ !

ಹಿಂದೆಂದಿಗೂ ಕಂಡರಿಯದ ಕೇಳರಿಯದ ದಯನೀಯ ಸ್ಥಿತಿ ॥ 2 ॥

ಕಾಣದ ಕರೊನಾ ವೈರಸ್‌ನಿಂದ ಜಗತ್ತಿನಾದ್ಯಂತ ತುರ್ತುಪರಿಸ್ಥಿತಿ

ಜಾತ್ರೆ ಉತ್ಸವ ಮದುವೆ ರಥೋತ್ಸವ ಮುಂತಾದವುಗಳ ರದ್ಧತಿ

ಶಾಲಾ ಕಾಲೇಜು ವಿದ್ಯಾಲಯ ಅವು ನಡೆಸುವ ಪರೀಕ್ಷಾ ಪದ್ಧತಿ

ಇದೇ ರೀತಿ ಮುನ್ನೇಚ್ಚರಿಕೆ ವಹಿಸಿದರೆ ಯಾವ ತೊಂದರೆ ಇರದು ॥ 3 ॥

ಈ ದಿನದೊಳು ಅತಿ ಕಡ್ಡಾಯವೊ ಮುಖಕೆ ಮಾಸ್ಕ್ ಧರಿಸುವುದು

ಆಲಿಂಗನ ಹಸ್ತಲಾಘವಕೆ ಬದಲು ಲೇಸು ಕರ ಮುಗಿಯುವುದು

ಮರೆಯದಿರು ದಿನದೊಳು ಮೂರ‌್ನಾಲ್ಕು ಬಾರಿ ಕೈತೊಳೆಯುವುದು

ಮುಂಜಾಗ್ರತೆ ವಹಿಸಿದರೆ ಕರೊನಾ ವೈರಸ್‌ನಿಂದ ಭಯವಿಲ್ಲ ತಿಳಿಯಿರಿ ॥ 4 ॥

ಕಣ್ಣು ಮೂಗು ಬಾಯಿ ಸ್ಪರ್ಶಿಸುವುದ ತಪ್ಪಿಸುತ ಸ್ವಚ್ಛತೆ ಕಾಯ್ದುಕೊಳ್ಳಿರಿ

ಕೆಮ್ಮುವಾಗ ಸೀನುವಾಗ ಕರವಸ್ತ್ರ ಟಿಶ್ಯು ಪೇಪರ್ ತಪ್ಪದೆ ಬಳಸಿರಿ

ಸೋಂಕು ಪೀಡಿತರ ಸಂಪರ್ಕದಿಂದ ದೂರ ಇರುವುದ ಮರೆಯದಿರಿ

ನಾವು ವಾಸಿಸುತ್ತಿರುವುದು ಏಷ್ಯ ಖಂಡಕೆ ಸೇರಿದ ಭವ್ಯ ಭಾರತದಲ್ಲಿ
ಪ್ರಾಚೀನ ಸಂಸ್ಕೃತಿ, ಆಹಾರ, ವಿಜ್ಞಾನ, ವೈದ್ಯಕೀಯ ಜೀವನ ಪದ್ಧತಿಯಲ್ಲಿ
ಸಮಭಾಜಕ ರೇಖೆಯು ಹಾಯ್ದು ಹೋಗಿರುವ ಉಷ್ಣವಲಯದಲ್ಲಿ
ರೋಗ ನಿರೋಧಕ ಶಕ್ತಿಯು ನಮ್ಮೊಳಗೆ ಇರುವಾಗ ಭಯವು ಇನ್ನೆಲ್ಲಿ ॥ 5 ॥