ಚಿತ್ರದುರ್ಗ: ವಿದ್ಯುತ್ ಉಪ ಕೇಂದ್ರದ ಕಾಮಗಾರಿಗೆ ಸಂಬಂಧಿಸಿದಂತೆ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಚಿತ್ರದುರ್ಗ ತಾಲೂಕು ಗೊಡಬನಹಾಳ್‌ನಲ್ಲಿ 1053.64 ಲಕ್ಷ ರೂ.ವೆಚ್ಚದ ವಿದ್ಯುತ್ ಉಪಕೇಂದ್ರದ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಾನು ಪ್ರಥಮ ಬಾರಿಗೆ ಶಾಸನಸಭೆಗೆ ಆಯ್ಕೆಯಾದ ಸಂದರ್ಭದಿಂದಲೂ ಈ ಕೇಂದ್ರಕ್ಕಾಗಿ ಹೋರಾಟ ನಡೆದಿತ್ತು. ಭೂಮಿಗೆ ಸಂಬಂಧಿಸಿದಂತೆ ಪರಿಹಾರ ಕಡಿಮೆ ಕೊಡಲಾಗುತ್ತಿದೆ ಎಂದಾದರೆ ಆ ಕುರಿತು ಡಿಸಿ ಅವರೊಂದಿಗೆ ಚರ್ಚಿಸಿ, ಹೆಚ್ಚಿನ ಪರಿಹಾರ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದರು.
ಬೆಸ್ಕಾಂನ ಮುಖ್ಯಇಂಜಿನಿಯರ್ ಗುರುಮೂರ್ತಿ, ಕೆಪಿಟಿಸಿಎಲ್ ಅಧಿಕಾರಿ ನಾರಾಯಣ, ದಾವಣಗೆರೆ ವಿಭಾಗ ಬೆಸ್ಕಾಂ ಇಇ ಸುಭಾಷ್‌ಚಂದ್ರ, ಇಂಜಿನಿಯರ್‌ಗಳಾದ ಮಲ್ಲಿಕಾರ್ಜುನ ಸ್ವಾಮಿ, ಜಗದೀಶ್, ರಮೇಶ್, ತಾ.ಪಂ.ಸದಸ್ಯೆ ಪ್ರತಿಭಾ ಅನ್ನೇಹಾಳ್, ಗ್ರಾಪಂ ಅಧ್ಯಕ್ಷ ವರದರಾಜು ಮತ್ತಿತರರು ಇದ್ದರು.