ಜಿಲ್ಲೆ

ಗೋದಾಮಿಗೆ ಭೇಟಿ ನೀಡಿ ತಿಪ್ಪಾರೆಡ್ಡಿ

Chitradurga

ಚಿತ್ರದುರ್ಗ: ತಾಲೂಕಿನ ಗುಡ್ಡದರಂಗವ್ವನಹಳ್ಳಿ ಸರ್ಕಾರಿ ಗೋದಾಮಿಗೆ ಬುಧವಾರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭೇಟಿ ನೀಡಿ ಪಡಿತರ ಅಕ್ಕಿ ದಾಸ್ತಾ ನು ಗುಣಮಟ್ಟವನ್ನು ಪರಿಶೀಲಿಸಿದರು.

ದಿಗ್ವಿಜಯ ನ್ಯೂಸ್ ಬಯಲಿಗೆ ಎಳೆದ ಅಕ್ಕಿಗೆ ಮ್ಯಾಲತಿನ್ ಸಿಂಪಡಣೆ ಕುರಿತ ವರದಿ ಗಮನಿಸಿದ ಅವರು, ಅಕ್ಕಿ ಮಾದರಿಯನ್ನು ಕೂಡಲೇ ಮೈಸೂರಿನ ಸಿಎಫ್‌ಟಿಆರ್‌ಐ ಹಾಗೂ ಬೆಂಗಳೂರಿನ ಟಿಎಚ್‌ಐ ಲ್ಯಾಬ್‌ಗೆ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

0.51 ಪಿಪಿಎಂ ಪ್ರಮಾಣದಲ್ಲಿ ಮ್ಯಾಲತಿನ್ ಅಂಶವಿದ್ದರೆ ಆರೋಗ್ಯದ ಮೇಲೆ ಯಾವುದೇ ತೊಂದರೆ ಆಗದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು.

ಆದರೆ, ಈ ಗೋದಾಮಿನಲ್ಲಿ ಹೆಚ್ಚಿನ ಪ್ರಮಾಣದ ಮ್ಯಾಲತಿನ್ ಇದ್ದು, ಇದರಿಂದಾಗಿ ಆರೋಗ್ಯದ ಮೇಲೆ ದುಷ್ಟಾರಿಣಾಮವುಂಟಾಗುತ್ತದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ವಿವಿಧ ಗೋದಾಮಿನಲ್ಲಿ ದಾಸ್ತಾನಿದ್ದ ನಾಲ್ಕು ಮೂಟೆಗಳಿಂದ ಅಧಿಕಾರಿಗಳು ಅಕ್ಕಿಯನ್ನು ಸ್ಯಾಂಪಲ್ ಪಡೆದರು.

ಆಹಾರ ಸುರಕ್ಷತೆ ಜಿಲ್ಲಾ ಅಂಕಿತ ಅಧಿಕಾರಿ ಡಾ.ತುಳಸಿ ರಂಗನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಧುಸೂದನ್, ಆಹಾರ ಸುರಕ್ಷಿತಾಧಿಕಾರಿ ತಿರುಮಲೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮತ್ತಿತರರು ಇದ್ದರು.