ಜಿಲ್ಲೆ

ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಖ್ಯೆಯಲ್ಲಿ ಹೆಚ್ಚಳ

Chitradurga

ಚಿತ್ರದುರ್ಗ: ಲಾಕ್‌ಡೌನ್ ಸಡಿಲಿಕೆ ಬಳಿಕ ಕೆಎಸ್‌ಆರ್‌ಟಿಸಿ ಆರಂಭಿಸಿರುವ ತಾಲೂಕು ಹಾಗೂ ಹಲವು ಜಿಲ್ಲಾ ಕೇಂದ್ರಗಳಿಗೆ ಬಸ್‌ಗಳ ಸಂಚಾರ ಸಂಖ್ಯೆ ಹಾಗೂ ಸಮಯದ ಅವಧಿಯನ್ನು ಸೋಮವಾರ ಹೆಚ್ಚಿಸಲಾಗಿದೆ.

ಬಸ್‌ಗಳ ಸಂಚಾರ ಈಗ ಬೆಳಗ್ಗೆ 5ರಿಂದ ರಾತ್ರಿ 9ರ ವರೆಗೆ ಇರುತ್ತದೆ. 150ಕ್ಕೂ ಹೆಚ್ಚು ವಾಹನಗಳನ್ನು ಈಗ ನಿತ್ಯವೂ ಓಡಿಸಲಾಗುತ್ತಿದೆ. ಚಿತ್ರದುರ್ಗದಿಂದ ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಹೊಸಪೇಟೆ, ಚಳ್ಳಕೆರೆಯಿಂದ ಬಳ್ಳಾರಿ, ಹೀಗೆ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ವಿವಿಧ ಜಿಲ್ಲಾ ಕೇಂದ್ರಗಳಿಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ.