ಜಿಲ್ಲೆ

ಅಗತ್ಯ ವ್ಯಕ್ತಿಗಳಿಗೆ ಪಾಸ್ ವಿತರಣೆ

Chitradurga

ಚಿತ್ರದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲ ಅಗತ್ಯ ಸೇವೆಗಳಿಗೆ ಪಾಸ್ ಪಡೆಯಲು ಸಂಬಂಧಿಸಿದ ತಹಸೀಲ್ದಾರ್ ಕಚೇರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ದಿನಸಿ, ಪಡಿತರ ಅಂಗಡಿ ನೌಕರರು, ಡೈರಿ, ಹಾಲಿನ ಬೂತ್ ಉದ್ಯೋಗಿಗಳು, ಮೇವಿನ ಅಂಗಡಿ, ಮಾಂಸ, ಮೀನು ಅಂಗಡಿ ನೌಕರರು, ಐಟಿ, ಐಟಿ ಸಂಬಂಧಿತ ಅಗತ್ಯ ಸೇವಾ ನೌಕರರು, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮು ನೌಕರರು, ಉತ್ಪಾದನಾ ಮತ್ತು ಅಗತ್ಯ ಸರಕು ಸಾರಿಗೆ ನೌಕರರು, ಪ್ರವಾಸಿಗರು ಇರುವ ಮತ್ತು ಲಾಕ್‌ಡೌನ್‌ನಿಂದ ಸಿಲುಕಿಕೊಂಡಿರುವ ಹೋಟೆಲ್ ನೌಕರರಿಗೆ ಪಾಸ್ ಅಗತ್ಯವಿದೆ.

ವಾರ್ ರೂಂ. ಸ್ಥಾಪನೆ: ಸಾರ್ವಜನಿಕರ ಅಗತ್ಯ ಸೇವೆಗಳಿಗೆ ಜಿಲ್ಲಾಡಳಿತದಿಂದ ವಾರ್ ರೂಂ. ಸ್ಥಾಪಿಸಿದೆ. ವೈದ್ಯಕೀಯ ಸೇವೆ, ಆಹಾರ ಪದಾರ್ಥ, ತರಕಾರಿ, ವಾಹನ ಮತ್ತಿತರ ಸೇವೆ. ನಿರ್ಗತಿಕರು, ಅಲೆಮಾರಿಗಳು, ವಲಸಿಗರಿಗೆ, ನಿರಾಶ್ರೀತರಿಗೆ ಆಹಾರದ ಅವಶ್ಯವಿದ್ದಲ್ಲಿ ವಾರ್ ರೂಂ. (08194-222027, 222035, 222038, 222044, 222050, 222056) ಸಂಪರ್ಕಿಸುವಂತೆ ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.