ಜಿಲ್ಲೆ

ಕುರುಬ ಸಮುದಾಯಕ್ಕೂ ಸಹಾಯಧನ ನೀಡಿ

Chitradurga

ಚಿತ್ರದುರ್ಗ: ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸುತ್ತಿರುವುದರಿಂದ ಎಲ್ಲ ಶ್ರಮಿಕ ವರ್ಗದವರಂತೆ ಕುರುಬ ಸಮುದಾಯಕ್ಕೂ ಧನ ಸಹಾಯ ನೀಡುವಂತೆ ಹಾಲುಮತ ಮಹಾಸಭಾದ ತಾಲೂಕು ಘಟಕ ಉಪ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಕುರುಬ ಸಮುದಾಯದವರು ಕುರಿಗಾಹಿತನ, ಕುರಿ ಉಣ್ಣೆ, ಕಂಬಳಿ ತಯಾರಿಕೆಯನ್ನು ನೆಚ್ಚಿಕೊಂಡು ಜೀವಿಸುತ್ತಿದ್ದಾರೆ. ಗೊಲ್ಲರು, ನಾಯಕರು ಕುರಿ, ಆಡುಗಳನ್ನು ಮೇಯಿಸುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಸಮುದಾಯಕ್ಕೂ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜತೆಗೆ ಹಿಂದಿನ ಸರ್ಕಾರ ಅನುಗ್ರಹ ಯೋಜನೆಯಡಿ ನೀಡುತ್ತಿದ್ದ ಸಹಾಯ ಧನವನ್ನು ಮುಂದುವರಿಸಬೇಕು ಎಂದು ತಾಲೂಕು ಅಧ್ಯಕ್ಷ ಎಂ.ನಿಶಾನಿ ಶಂಕರ್ ಆಗ್ರಹಿಸಿದರು.

ತಾಲೂಕು ಉಪಾಧ್ಯಕ್ಷ ಎನ್.ಪರಮೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಬಾಗೇಶ್, ಸಂಘಟನಾ ಕಾರ್ಯದರ್ಶಿ ತಿಪ್ಪೇಸ್ವಾಮಿ, ಸಂಚಾಲಕ ಶಿವಣ್ಣ, ಷಣ್ಮುಖ ಹಾಜರಿದ್ದರು.