ಚಿತ್ರದುರ್ಗ: ಲಾಕ್‌ಡೌನ್‌ನ ಈ ಸಂಕಷ್ಟ ಸಮಯದಲ್ಲಿ ನೊಂದವರಿಗೆ ನೆರವಾಗುತ್ತಿರುವ ಮುರುಘಾ ಶರಣರು ನಡೆ ಅತ್ಯಂತ ಶ್ಲಾಘನೀಯವೆಂದು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಹೇಳಿದರು.
ಮಠದ ಆವರಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ, ಕಾರ್ಮಿಕರು, ಅಂಗವಿಕಲರು, ರಂಗಭೂಮಿ ಕಲಾವಿದರ ಸಹಿತ 500 ಬಡ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಿ ಮಾತನಾಡಿದರು.
ಶರಣರ ಚಿಂತನ ಕ್ರಮಗಳು ವಿಭಿನ್ನವಾಗಿವೆ. ತುಳಿತಕ್ಕೊಳಗಾದ ಜನರ ಏಳಿಗೆಗೆ ಶರಣರು ನಿರಂತರ ಪ್ರಯತ್ನಿಸುತ್ತಿದ್ದಾರೆ, ಎಲ್ಲ ಜಾತಿ,ಧರ್ಮದವರನ್ನು ನಮ್ಮವರೆನ್ನುವ ಮನೋಭಾವದೊಂದಿಗೆ ಸಮಾಜ ಸುಧಾರಣೆ ಮಾಡುತ್ತಿದ್ದಾರೆ ಎಂದರು.
ಕಾರ್ಮಿಕರ ದಿನಾಚರಣೆಯ ಅಂಗವಾಗಿ ಶ್ರಮಿಕರಿಗೆ ಗೌರವ ಸಲ್ಲಿಸಿ ಮಾತನಾಡಿದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಕರೊನಾ ವೈರಸ್ ವಿರುದ್ಧ ಜನ ಜಾಗೃತರಾಗಬೇಕು ಎಂದು ತಿಳಿಸಿದರು.
ಶಿರಾದ ಪ್ರೆಸಿಡೆನ್ಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಚಿದಾನಂದಗೌಡ ಮಾತನಾಡಿ, ಮುರುಘಾ ಮಠ ಎಂದರೆ ಕ್ರಾಂತಿಕಾರಿ ಬದಲಾವಣೆಗಳಿಗೆ ಮತ್ತೊಂದು ಹೆಸರಾಗಿದೆ ಎಂದು ಅಭಿಪ್ರಾಯಪಟ್ಟರು.
ಭೂಮಾಪನಾ ಇಲಾಖೆ ಉಪನಿರ್ದೇಶಕ ಕೃಷ್ಣಪ್ರಸಾದ್, ಎ.ಜೆ.ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಉಮೇಶ್, ಲತಾ ಉಮೇಶ್, ಸುರೇಶ್, ಹನುಮಂತೇಗೌಡ, ಶಿವಪ್ರಕಾಶ್ ದಗ್ಗೆ ಇತರರಿದ್ದರು.