ಚಿತ್ರದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಕದಂಬ ಗೆಳೆಯರ ಬಳಗ ಗುರುವಾರ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದೆ.
ಹಿರೇಬೆನ್ನೂರು ಗೊಲ್ಲರಹಟ್ಟಿ, ಚಿಕ್ಕಬೆನ್ನೂರು ಪರಿಶಿಷ್ಟ ಕಾಲನಿಯಲ್ಲಿ ಕೃಷಿ, ದಿನಗೂಲಿ ಕಾರ್ಮಿಕರಿಗೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ನಿರಾಶ್ರಿತರಿಗೆ ಅಕ್ಕಿ, ಬೇಳೆ, ರಾಗಿ ಹಿಟ್ಟು, ಬೆಲ್ಲ ಮತ್ತಿತರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಬಳಗದ ಸದಸ್ಯರಾದ ಕೆ.ಚೈತ್ರಾ, ರಾಮ್ ಹರೀಶ್ ಯಾದವ್, ನವೀನ್, ಶಿವಾಮೃತ, ಮೋಹಿನ್, ಸಂತೋಷ್, ಚೈತ್ರಾ, ಶ್ರುತಿ, ವೀಣಾ, ಎಡಿಸಿ ಸಿ.ಸಂಗಪ್ಪ, ಕುಡಾ ಆಯುಕ್ತ ಸೋಮಶೇಖರ್, ಎಸಿಎಫ್ ರಾಘವೇಂದ್ರ ಮತ್ತಿತರರು ಇದ್ದರು.