ಜಿಲ್ಲೆ

ಜೀವದ ಹಂಗು ತೊರೆದವರಿಗೆ ಬೇಕು ರಕ್ಷಣೆ

Chitradurga

ಚಿತ್ರದುರ್ಗ: ಜೀವದ ಹಂಗು ತೊರೆದು ಸೋಂಕು ಹತೋಟಿಗೆ ಶ್ರಮಿಸುತ್ತಿರುವ ನಮಗೆ ಸೂಕ್ತ ರಕ್ಷಣೆ, ಭದ್ರತೆ ಬೇಕು ಎಂದು ಒತ್ತಾಯಿಸಿ ಆಶಾ ಕಾರ‌್ಯಕರ್ತೆಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ನೇತೃತ್ವದಲ್ಲಿ ಒನಕೆ ಓಬವ್ವ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಲಾಕ್‌ಡೌನ್‌ನಿಂದಾಗಿ ಜನರು ಮನೆಗಳಲ್ಲಿ ಸುರಕ್ಷಿತವಾದ್ದಾರೆ. ಆದರೆ, ನಾವು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಕರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇವೆ. ಈ ವೇಳೆ ಕೆಲವೆಡೆ ನಮ್ಮ ಮೇಲೆ ಹಲ್ಲೆಗಳಾಗಿವೆ ಎಂದು ಅಳಲು ತೋಡಿಕೊಂಡರು.

ಹಲ್ಲೆಕೋರರಿಗೆ ಕಠಿಣ ಶಿಕ್ಷೆ, ಹಲ್ಲೆಗೆ ಒಳಗಾದ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ತಕ್ಷಣ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆಶಾ ಕಾರ್ಯರ್ತೆಯರಾದ ಗಿರಿಜಮ್ಮ, ಲಕ್ಷ್ಮಿ, ನೇತ್ರಾ, ಪಾತೀಮಾ, ಜಮೀಲಾ ಬೇಗಂ, ಎಐಎಂಎಸ್‌ಎಸ್ ಸಂಘಟನೆ ಪ್ರಮುಖರಾದ ಸುಜಾತಾ, ಕುಮುದಾ, ಮೇಘನಾ, ಎಐಯುಟಿಯುಸಿ ಮುಖಂಡ ಎಚ್.ರವಿಕುಮಾರ್ ಇತರರಿದ್ದರು.