ಜಿಲ್ಲೆ

ಬೆಂಗಳೂರು ತಂಡ ಪ್ರಥಮ

ಚಿತ್ರದುರ್ಗ: ನಗರದಲ್ಲಿ ಜರುಗಿದ ರಾಜ್ಯ ಕಾನೂನು ವಿವಿ ಅಂತರ್ ಕಾಲೇಜ್ ಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜ್ ಪ್ರಥಮ ಸ್ಥಾನ ಪಡೆದುಕೊಂಡಿತು.

ನಗರದಲ್ಲಿ ಫೆ.25ರಂದು ಆರಂಭವಾಗಿದ್ದ ಪಂದ್ಯಾವಳಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಅಂತಿಮ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡಕ್ಕೆ ತೀವ್ರ ಪೈಪೋಟಿ ನೀಡಿದ ಕೋಲಾರದ ಬಸವಶ್ರಿ ಕಾನೂನು ಕಾಲೇಜ್ ದ್ವೀತಿಯ ಸ್ಥಾನಕ್ಕೆ ಸಮಾಧಾನ ಪಟ್ಟಿಕೊಳ್ಳಬೇಕಾಯಿತು.

ಕೋಲಾರದ ಸರ್ಕಾರಿ ಕಾನೂನು ಕಾಲೇಜು (ತೃ), ಹುಬ್ಬಳ್ಳಿ ಕೆಎಸ್‌ಎಲ್‌ಯು ಕಾನೂನು ಕಾಲೇಜು ತಂಡಗಳು (ಚತುರ್ಥ)ಬಹುಮಾನ ಪಡೆದುಕೊಂಡರು.

ಪಂದ್ಯಾವಳಿ ಸರಣಿ ಪುರುಷೋತ್ತಮ ಆಟಗಾರ-ಬಸವಶ್ರೀ ಕಾಲೇಜಿನ ಮಹೇಶ್, ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮ-ಬಿಎಂಎಸ್ ಕಾಲೇಜಿನ ಗುಣಶಂಕರ್, ಪಂದ್ಯ ಶ್ರೇಷ್ಠ ಆಟಗಾರ-ಲಲಿತ್, ಶ್ರೇಷ್ಠ ಬೌಲರ್-ಶ್ರೀನಿಧಿ, ಬೆಸ್ಟ್ ಕ್ಯಾಚರ್ ಆಗಿ ಕೋಲಾರದ ಸರ್ಕಾರಿ ಕಾನೂನು ಕಾಲೇಜಿನ ಬಿ.ಎಲ್.ಮೂರ್ತಿ ಹೊರಹೊಮ್ಮಿದರು.

ಶನಿವಾರದ ಸಮಾರೋಪದಲ್ಲಿ ಬಹುಮಾನ ವಿತರಿಸಲಾಯಿತು. ಚಿತ್ರದುರ್ಗದ ಹಿರಿಯ ಕ್ರೀಡಾಪಟು ಗೋವಿಂದರಾಜು ಅವರನ್ನು ಗೌರವಿಸಲಾಯಿತು. ಮುಖಂಡರಾದ ಪಟೇಲ್ ಶಿವಕುಮಾರ್, ಉದ್ಯಮಿ ಎಚ್.ಇಂದ್ರಪ್ಪ, ಚಿತ್ರದುರ್ಗ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಅಶೋಕ್, ಹುಬ್ಬಳ್ಳಿ ಕೆಎಸ್‌ಎಲ್‌ಯು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಖಾಲಿದ್ ಖಾನ್, ಎಸ್‌ಜೆಎಂ ಕಾನೂನು ಕಾಲೇಜು ಪ್ರಾಚಾರ್ಯ ವಿಶ್ವನಾಥ್ ಇತರರಿದ್ದರು.