ಜಿಲ್ಲೆ

ಹಣಕಾಸಿನ ಜಗಳ ಕೊಲೆಯಲ್ಲಿ ಅಂತ್ಯ

Chitradurga

ಚಿತ್ರದುರ್ಗ: ಜಮೀನಿನಲ್ಲಿ ಬೆಳೆದ ಬೆಳೆಯ ಹಣಕಾಸು ಹಂಚಿಕೆ ವಿಚಾರ ಸೋಮವಾರ ರಾತ್ರಿ ಕೊಲೆಯಲ್ಲಿ ಅಂತ್ಯ ಕಂಡಿದೆ.

ಕುಮಾರ ನಾಯ್ಕ (33) ಮೃತ ದುರ್ದೈವಿ. ಹೊಳಲ್ಕೆರೆ ತಾಲೂಕು ರಂಗಯ್ಯನದುರ್ಗ ಕಾವಲಿನ ಸಹೋದರರಾದ ಕುಮಾರ ನಾಯ್ಕ, ಸಂತೋಷ ನಾಯ್ಕ ನಡುವೆ ಹಣದ ವಿಚಾರಕ್ಕೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಸೋಮವಾರ ಜಗಳ ವಿಕೋಪಕ್ಕೆ ತಿರುಗಿ ಸಂತೋಷ ನಾಯ್ಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.