ಚಿತ್ರದುರ್ಗ: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಣೆಯಾದ ಕೆಲವೇ ದಿನಗಳಲ್ಲಿ ಅಗತ್ಯ ಔಷಧಗಳ ಕೊರತೆ ಅನುಭವಿಸಿದ್ದ ಜಿಲ್ಲಾಸ್ಪತ್ರೆ ಡಯಾಲಿಸಿಸ್ ಕೇಂದ್ರದಲ್ಲಿ ಈಗ ಮತ್ತೆ ಔಷಧ ಸಹಿತ ನಾನಾ ಸಮಸ್ಯೆಗಳು ಕಾಣಿಸಿದ್ದು, ಸೋಮವಾರ ರೋಗಿಗಳಿಗೆ ಡಯಾಲಿಸಿಸ್ ಸಾಧ್ಯವಾಗಿಲ್ಲ.
ಇಲ್ಲಿ ನಿತ್ಯ 27 ರೋಗಿಗಳಿಗೆ, ತಾಲೂಕು ಆಸ್ಪತ್ರೆಗಳಲ್ಲಿ ಆರು ಡಯಾಲಿಸ್ ಮಾಡಲಾಗುತ್ತದೆ. ಒಂದು ದಿನ ತಪ್ಪಿದರೆ ರೋಗಿಗಳ ನಿರ್ವಹಣೆ ಅಸ್ತವ್ಯಸ್ತವಾಗಲಿದೆ.
ಜಿಲ್ಲಾ ಕೇಂದ್ರದಲ್ಲಿನ ಸಮಸ್ಯೆ ಕಾರಣಕ್ಕೆ ನೊಂದಂಥ ಕೆಲವು ರೋಗಿಗಳು ಅನಿವಾರ್ಯವಾಗಿ ದಾವಣಗೆರೆ ತೆರಳುವಂತಾಯಿತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎ.ನಾರಾಯಣಸ್ವಾಮಿ, ಸಮಸ್ಯೆ ನನ್ನ ಗಮನಕ್ಕೆ ಬಂದಿದೆ, ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಡಯಾಲಿಸಿಸ್ ಕೇಂದ್ರ ಕಾರ್ಯನಿರ್ವಹಿಸದೇ ಇರುವ ಕುರಿತಂತೆ ಜಿಲ್ಲಾಸ್ಪತ್ರೆ ಡಿಎಚ್ ಡಾ.ಎಚ್.ಜೆ. ಬಸವರಾಜಪ್ಪ ದೂರವಾಣಿ ಕರೆಗೆ ಸ್ಪಂದಿಸಿಲ್ಲ.