ಚಿತ್ರದುರ್ಗ: ಕೋವಿಡ್-19ರ ಹಿನ್ನೆಲೆಯಲ್ಲಿ ಚಿತ್ರದುರ್ಗದ ಡಿಎಆರ್ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಆರೋಗ್ಯ ತಪಾಸಣೆ ಶುಕ್ರವಾರ ಆರಂಭವಾಯಿತು.
ಮೊದಲ ದಿನ 250ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಯಿತು. ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ಐಎಂಎ ಅಧ್ಯಕ್ಷ ಡಾ.ದೀಪಕ್, ಡಾ.ಸುಧಾ, ಡಾ.ಬಸವರಾಜಪ್ಪ, ಎಎಸ್ಪಿ ಎಂ.ಬಿ.ನಂದಗಾವಿ, ನಗರ ಠಾಣೆ ಪಿಐ ನಯೀಂ ಅಹಮದ್ ಇತರರಿದ್ದರು.