ಚಿತ್ರದುರ್ಗ: ಕನ್ನಡದ ಮೊದಲ ಬಯೊಪಿಕ್ ನಾವೆಲ್‌ಗೆ ಅಕಾಡೆಮಿ 2018ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚದುರಂಗ ದತ್ತಿ ನಿಧಿ ಪ್ರಶಸ್ತಿ ದೊರೆತಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದು ಲೇಖಕ ಡಾ.ಲೋಕೇಶ ಅಗಸನಕಟ್ಟೆ ಹೇಳಿದರು.
ತಮಗೆ ದೊರೆತಿರುವ ಪುರಸ್ಕಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಪುರಾಣ, ಇತಿಹಾಸ ಹಾಗೂ ಸಾಮಾಜಿಕತೆಯನ್ನು ಆಧರಿಸಿರುವ ಅತೀತ ಲೋಕದ ಕಾದಂಬರಿ ಇದಾಗಿದೆ.
ಇದು ಕನ್ನಡದ ಮೊದಲ ಅವಧೂತ ಕೃತಿ ಎನಿಸಿದೆ. ಮನುಷ್ಯನ ಒಳಗಿರುವ ಅತೀತ ಶಕ್ತಿಯನ್ನು ಬಳಸಿಕೊಂಡು ಸಾಮಾಜಿಕ ಅನಿಷ್ಠಗಳಿಗೆ ಚಿಕಿತ್ಸೆ ನೀಡುವುದಾಗಿದೆ. ಈ ಕೃತಿಯನ್ನು ಅವಧೂತ ಶ್ರೀಎಂ ಬಿಡುಗಡೆ ಮಾಡಿದ್ದರು. ಚಂದ್ರಶೇಖರ್ ಕಂಬಾರ ಸೇರಿ ಸಾಹಿತ್ಯ ಕ್ಷೇತ್ರದ ಅನೇಕರ ಮೆಚ್ಚುಗೆ ಪಡೆದ ಈ ಕೃತಿ ಮಾರುಕಟ್ಟೆಯಲ್ಲೂ ಯಶಸ್ಸನ್ನು ಕಂಡಿದೆ. ಟಿ.ಎಸ್.ನಾಗಭೂಷಣ ಕೃತಿಯನ್ನು ತೆರೆಗೆ ತರಲು ಮುಂದಾಗಿದ್ದಾರೆ ಎಂದು ಹೇಳಿದರು.