ಜಿಲ್ಲೆ

ಏ.18ಕ್ಕೆ ಗೂಳಿಹಟ್ಟಿ ಶೇಖರ್ ಫೋನ್‌ಇನ್

Chitradurga

ಚಿತ್ರದುರ್ಗ: ಕರ್ನಾಟಕದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಚಿತ್ರದುರ್ಗದ ಕಚೇರಿಯಲ್ಲಿ ಏ.18ರಂದು ಆಯೋಜಿಸಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾಜಿ ಸಚಿವ,ಹೊಸದುರ್ಗದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಭಾಗವಹಿಸಲಿದ್ದಾರೆ.

ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಶಾಸಕರು ಹೊಸದುರ್ಗ ಕ್ಷೇತ್ರದ ಜನತೆ ದೂರವಾಣಿ ಮೂಲಕ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವರು.

ಕರೊನಾ ವೈರಾಣು ನಿವಾರಣೆಗೆ ಕೈಗೊಂಡ ಕಾರ್ಯ, ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಸಾರ್ವಜನಿಕರು ದೂರವಾಣಿ ಕರೆ ಮಾಡಿ ಶಾಸಕರ ಜತೆ ಮಾತನಾಡಬಹುದು.

ಕೃಷಿ ಉತ್ಪನ್ನಗಳ ಸಾಗಣೆಯಲ್ಲಿ ಸಮಸ್ಯೆಗಳು, ನಿರಾಶ್ರಿತರು, ವಲಸಿಗ ಕಾರ್ಮಿಕರಿಗೆ ಕಾಡುತ್ತಿರುವ ಆಹಾರ-ವಸತಿ ಸಮಸ್ಯೆ, ವೈದ್ಯಕೀಯ ಸೇವೆಯಲ್ಲಿನ ವ್ಯತ್ಯಯ, ಜನ, ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಇತರೆ ವಿಷಯಗಳ ಬಗ್ಗೆ ಗಮನ ಸೆಳೆಯಬಹುದು.

ಈಗಾಗಲೇ ಮುಂಗಾರು ಕೃಷಿ ಚಟುವಟಿಕೆಗೆ ಚಾಲನೆ ಸಿಕ್ಕಿದ್ದು, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಸೆರಿ ಕೃಷಿ ಸಂಬಂಧಿತ ಪ್ರಶ್ನೆಗಳು, ತೋಟಗಾರಿಕೆ ಉತ್ಪನ್ನಗಳ ಮಾರಾಟ, ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾದ ಹಾನಿ ಕುರಿತು ಮುಕ್ತವಾಇ ಮಾತನಾಡುವ ಜತೆಗೆ ಸೂಕ್ತ ಪರಿಹಾರೋಪಾಯಗಳ ಕುರಿತು ಸಮಾಲೋಚಿಸಬಹುದು. ಹೊಸದುರ್ಗ ಕ್ಷೇತ್ರದ ಜನತೆ ದೂರವಾಣಿ ಸಂಖ್ಯೆ- 08194 225111ಗೆ ಕರೆ ಮಾಡಿ ಮಾತನಾಡಬಹುದು.