ಜಿಲ್ಲೆ

22 ಜೂಜುಕೋರರ ಬಂಧನ

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಗುರುವಾರ ಪೊಲೀಸರು 22 ಜೂಜುಕೋರರನ್ನು ಬಂಧಿಸಿ, 24050 ರೂ. ವಶಪಡಿಸಿಕೊಂಡಿದ್ದಾರೆ. ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಸರ್ಕಾರಿ ಶಾಲೆ ಬಳಿ 9 ಜನರನ್ನು ಬಂಧಿಸಿ, 12190 ರೂ. ವಶಕ್ಕೆ ಪಡೆಯಲಾಗಿದೆ. ತುರುವನೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಿರಿಯೂರು ತಾಲೂಕು ಲಕ್ಕವ್ವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಐವರನ್ನು ಬಂಧಿಸಿ, 6760 ರೂ. ವಶಪಡಿಸಿಕೊಳ್ಳಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಗಿರಿ ಗ್ರಾಮದಲ್ಲಿ 8 ಜನರನ್ನು ಬಂಧಿಸಿ, 5100 ರೂ. ವಶಪಡಿಸಿಕೊಳ್ಳಲಾಗಿದೆ. ಅಬ್ಬಿನಹೊಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.