ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಜಿಪಂ ಆವರಣಕ್ಕೆ ಬಿಗಿ ಬಂದೋಬಸ್ತ್ ಇದ್ದರೂ ಸಾಮಾಜಿಕ ಅಂತರ ಮರೆಯಾಗಿತ್ತು. ಜಿಪಂ ಸದಸ್ಯರು, ಅವರ ಬೆಂಬಲಿಗರ ಸಹಿತ ಅನೇಕರು ಪೊಲೀಸರ ಮನವಿ ನಿರ್ಲಕ್ಷಿಸಿದ್ದರು. ಬಳಿಕ ಮುಖಂಡರು, ಜಿಪಂ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರಿಂದಾಗಿ ಕಚೇರಿ ಆವರಣ ಬಳಿಯೂ ಜನ ಜಾತ್ರೆ ಸೇರಿತು.
ಡಿಸಿ ಕಚೇರಿ ಬಳಿ ಒನಕೆ ಓಬವ್ವ ವೃತ್ತದಲ್ಲೇ ಇರುವ ಕಾಂಗ್ರೆಸ್ ಕಚೇರಿ ಬಳಿ ಪೊಲೀಸರು ಮೆಗಾ ಫೋನ್ ಮೂಲಕ ಎಷ್ಟೇ ಮನವಿ ಮಾಡಿದರು ಗುಂಪು ಕರಗಲಿಲ್ಲ. ಅಂತಿಮವಾಗಿ ಕೋಟೆ ಪಿಐ ಪ್ರಕಾಶ್ ಮತ್ತವರ ಸಿಬ್ಬಂದಿ ಪಕ್ಷದ ಕಚೇರಿಯೊಳಗೆ ಬಂದು ಕಾರ್ಯಕರ್ತರನ್ನು ಚದುರಿಸಿದರು. ಪೊಲೀಸರ ಕಟ್ಟೇಚ್ಚರದಿಂದಾಗಿ ಸಿಡಿಯಲು ಸಿದ್ಧವಾಗಿದ್ದ ಪಟಾಕಿಯ ಸದ್ದು ಕೇಳಿಸಲಿಲ್ಲ.