ಚಿತ್ರದುರ್ಗ: ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಸಂಬಂಧಿಸಿದಂತೆ 78 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಅವರುಗಳ ಮನೆಯಲ್ಲಿ ಕ್ವಾರಂಟೈನ್‌ಗೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ಸೋಮವಾರದ ಆರೋಗ್ಯ ವರದಿಯಲ್ಲಿ ತಿಳಿಸಿದೆ ಎಂದು ಡಿಎಚ್‌ಒ ಡಾ.ಪಾಲಾಕ್ಷ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರ‌್ಯಾಪಿಡ್ ರೆಸ್ಕ್ಯೂ ಟೀಮ್ ವಿದೇಶದಿಂದ ಬಂದಂತಹ ಅಥವಾ ಸಂಪರ್ಕ ಇರುವಂತಹ ಒಟ್ಟು 31 ಜನರನ್ನು ಗುರುತಿಸಿ ನಿಗಾದಲ್ಲಿರಿಸಿದೆ. ಜಿಲ್ಲಾಸ್ಪತ್ರೆ ಐಸೋಲೇಷನ್ ವಾರ್ಡ್‌ನಲ್ಲಿ ಯಾರೂ ಇಲ್ಲ. ಜಿಲ್ಲೆಯಲ್ಲಿ ಈವರೆಗೆ 150 ಜನರನ್ನು ನಿಗಾ ಇಡಲಾಗಿತ್ತು.
ಶಂಕಾಸ್ಪದ ಪ್ರಕರಣವೆಂದು ಪರಿಗಣಿಸಿದ್ದ ಪೈಕಿ 54 ಜನರು 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. 39 ಜನರ ಗಂಟಲು ದ್ರವ ಹಾಗೂ ರಕ್ತ ಮಾದರಿ ಪರೀಕ್ಷೆಯಲ್ಲಿ 25 ಜನರ ವರದಿ ನೆಗಟೀವ್ ಎಂದಿದ್ದು, 8 ಜನರ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ.