ಜಿಲ್ಲೆ

475 ಜನರಿಗೆ ಆರೋಗ್ಯ ತಪಾಸಣೆ

Chitradurga

ಚಿತ್ರದುರ್ಗ: ಜಿಲ್ಲೆಯಲ್ಲಿ ಸ್ಥಾಪಿಸಿರುವ 12 ಫೀವರ್ ಕ್ಲಿನಿಕ್‌ಗಳಲ್ಲಿ ಈವರೆಗೆ ಒಟ್ಟು 475 ಜನರು ಆರೋಗ್ಯ ತಪಾಸಣೆ ಮಾಡಿಸಿ ಕೊಂಡಿದ್ದಾರೆ. ಐಮಂಗಲದ ಕ್ಲಿನಿಕ್‌ನಲ್ಲಿ ಈವರೆಗೆ 119 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಹಿರಿಯೂರು-21, ಳ್ಳಕೆರೆ-82. ಹೊಳಲ್ಕೆರೆ-79 ಜನರ ಆರೋಗ್ಯ ತಪಾಸಣೆಯಲ್ಲಿ ಇಬ್ಬರಿಗೆ ಜ್ವರ ಕಂಡುಬಂದಿದೆ. ರಾಂಪುರ-15, ೊಳಕಾಲ್ಮೂರು-23. ಚಿತ್ರದುರ್ಗ ಎಸ್‌ಜೆಎಂ ಕಲಾ ಕಾಲೇಜು-23, ಭೀಮಸಮುದ್ರ-65 ಹಾಗೂ ಬಸವೇಶ್ವರ ಆಸ್ಪತ್ರೆಯಲ್ಲಿ 48 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಜಿಲ್ಲೆಯ 6 ತಾಲೂಕು ಆಸ್ಪತ್ರೆಗಳಲ್ಲಿ ಮಾ.30ರಿಂದ ಏ.1ರ ವರೆಗೆ ಜ್ವರ ಪರೀಕ್ಷೆಗೆ ಸಂಬಂಧಿಸಿದಂತೆ 892 ಮಹಿಳೆ, 801 ಪುರುಷರು ಸೇರಿ 1693 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಕರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ನಾಲ್ವರಿಗೆ ಹೆಚ್ಚಿನ ಆರೋಗ್ಯ ತಪಾಸಣೆಗೆ ಶಿಫಾರಸ್ಸು ಮಾಡಲಾಗಿದೆ.

ಚಿತ್ರದುರ್ಗ ತಾಲೂಕು-337, ಚಳ್ಳಕೆರೆ-251, ಹಿರಿಯೂರು-371, ಹೊಳಲ್ಕೆರೆ-288, ಹೊಸದುರ್ಗ-298 ಹಾಗೂ ಮೊಳಕಾಲೂರು ತಾಲೂಕಿನಲ್ಲಿ 148 ಜನರಿಗೆ ಜ್ವರ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.