ಚಿತ್ರದುರ್ಗ: ಗ್ರಾಮಾಂತರ ಗಡಿ ಸೇರಿ ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ. ಯಾವುದೇ ಕಾರಣಕ್ಕೂ ಯಾರನ್ನು ಜಿಲ್ಲೆ ಒಳಗೆ ಪ್ರವೇಶ ಇಲ್ಲ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.
ಡಿಸಿ ಕಚೇರಿಯಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಬೇರೆ ಊರಿನಿಂದ ಇಲ್ಲಿಗೆ ಬಂದವರು ಇದ್ದರೆ ಅವರನ್ನು ಕಳಿಸುವ ಬದಲು ಊಟ, ವಸತಿ ಸೌಕರ್ಯ ಕಲ್ಪಿಸಿ. ಆದರೆ, ಹೊಸದಾಗಿ ಜಿಲ್ಲೆಗೆ ಯಾರಿಗೂ ಪ್ರವೇಶ ನೀಡಬಾಋದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಪಾಸಣೆಗೆ ಒಳಗಾಗಿ: ಮಾ.18ರ ಬೆಳಗ್ಗೆ 10 ಗಂಟೆಗೆ ಕೆ.ಎ.57.ಎಫ್.3802 ರಾಜಹಂಸ ಬಸ್‌ನಲ್ಲಿ ಬೆಂಗಳೂರಿಂದ ದಾವಣಗೆರೆ ಬಂದಂಥ ವ್ಯಕ್ತಿಯಲ್ಲಿ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಆದ್ದರಿಂದ ಈ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ ಎಲ್ಲ ಪ್ರಯಾಣಿಕರು ಜಿಲ್ಲಾ ಆಸ್ಪತ್ರೆಯಲ್ಲಿ ತಪಾಣೆಗೆ ಒಳಗಾಗಬೇಕೆಂದು ಹೇಳಿದರು.
ಎಸ್ಪಿ ಜಿ.ರಾಧಿಕಾ, ಎಡಿಸಿ ಸಿ.ಸಂಗಪ್ಪ, ಉಪ ವಿಭಾಗಾಧಿಕಾರಿ ವಿ.ಪ್ರಸನ್ನ, ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್, ಜಿಲ್ಲಾ ಸರ್ಜನ್ ಡಾ.ಎಚ್.ಜೆ.ಬಸವರಾಜಪ್ಪ, ಐಎಂಎ ಅಧ್ಯಕ್ಷ ಡಾ.ದೀಪಕ್, ಬಸವೇಶ್ವರ ಆಸ್ಪತ್ರೆ ಮೆಡಿಕಲ್ ಅಧೀಕ್ಷಕ ಡಾ.ಪಾಲಾಕ್ಷಪ್ಪ, ಡಾ.ಮುಕುಂದರಾವ್ ಮತ್ತಿತರರು ಇದ್ದರು.