ಜಿಲ್ಲೆ

ಕರೊನಾ ಯೋಧರ ನೇಮಕ

Chitradurga

ಚಿತ್ರದುರ್ಗ: ಕರೊನಾ ಕುರಿತಂತೆ ನೈಜ ಮಾಹಿತಿ ತಿಳಿಸಲು ರಾಜ್ಯ ಸರ್ಕಾರ ‘ಕರೊನಾ ಯೋಧ’ ಸ್ವಯಂ ಸೇವಕ ಪಡೆ ನೇಮಿಸಲು ನಿರ್ಧರಿಸಿದೆ.

ವಿವಿಧೆಡೆ ಹರಡಿರುವ ವದಂತಿಗಳ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜನರಿಗೆ ನಿಜ ಮಾಹಿತಿ ತಿಳಿಸುವುದು ಹಾಗೂ ಈ ವೈರಸ್‌ಗೆ ಸಂಬಂಧಿತ ವಿಷಯಗಳ ಕುರಿತಂತೆ ಜಿಲ್ಲಾಡಳಿತ ಮತ್ತು ನಾಗರಿಕರ ನಡುವೆ ಪ್ರತಿ ತಾಲೂಕಿಗೆ ಕನಿಷ್ಠ ನಾಲ್ವರಂತೆ ದಿನದ ನಾಲ್ಕು ಪಾಳಿಗಳಲ್ಲಿ ಸೇತುವೆಯಾಗಿ ಕೆಲಸ ಮಾಡಲಿದ್ದಾರೆ.

ಆಸಕ್ತರು ವಾರ್ತಾ ಇಲಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾ ವಾರ್ತಾಧಿಕಾರಿ ಧನಂಜಯ ತಿಳಿಸಿದ್ದಾರೆ.