ಚಿತ್ರದುರ್ಗ: ಜಿಲ್ಲೆಯಲ್ಲಿ ಕರೊನಾ ಸಂಬಂಧಿಸಿದ ಯಾವುದೇ ಸೋಂಕು ದೃಢಪಟ್ಟಿಲ್ಲವೆಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಶನಿವಾರ ಸಂಜೆ ಬಿಡುಗಡೆ ಮಾಡಿರುವ ಆರೋಗ್ಯ ವರದಿಯಲ್ಲಿ ಮಾಹಿತಿ ನೀಡಿದ್ದು, ಜಿಲ್ಲಾದ್ಯಂತ ಸದ್ಯಕ್ಕೆ 65 ಜನರ ಮೇಲೆ ನಿಗಾ ಇಡಲಾಗಿದೆ. ಈ ಪೈಕಿ 64 ಜನರು ಅವರ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಒಬ್ಬರು ಜಿಲ್ಲಾಸ್ಪತ್ರೆಯಲ್ಲಿದ್ದಾರೆ.
ರ‌್ಯಾಪಿಡ್ ರೆಸ್ಕ್ಯೂ ತಂಡ ವಿದೇಶದಿಂದ ಬಂದಂತಹ ಅಥವಾ ಸಂಪರ್ಕ ಇರುವಂತಹ 22 ಜನರನ್ನು ಗುರುತಿಸಿ ನಿಗಾದಲ್ಲಿರಿಸಿದೆ. ಜಿಲ್ಲೆಯಲ್ಲಿ ಈವರೆಗೆ 93 ಜನರ ಮೇಲೆ ಇಡಲಾಗಿತ್ತು. ಶಂಕಾಸ್ಪದ ಪ್ರಕರಣವೆಂದು ಪರಿಗಣಿಸಿದ್ದವರ ಪೈಕಿ 20 ಜನರು ಈಗಾಗಲೆ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. 31 ಜನರ ಗಂಟಲು ದ್ರವ ಹಾಗೂ ರಕ್ತ ಮಾದರಿ ಪರೀಕ್ಷೆ ಪೈಕಿ 12 ಜನರ ವರದಿ ನೆಗಟಿವ್ ಇದೆ ಎಂದು ತಿಳಿಸಿದ್ದಾರೆ.