ಚಿತ್ರದುರ್ಗ: ಕರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಪ್ರಮುಖರು ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಸಂಚಾಲಕ ಟಿ.ಶಫೀವುಲ್ಲಾ ಮಾತನಾಡಿ, ಲಾಕ್‌ಡೌನ್‌ನಿಂದ ಬಡವರು, ಅಸಂಘಟಿತ ಮತ್ತು ವಲಸೆ ಕಾರ್ಮಿಕರ ಬದುಕು ನರಕವಾಗಿದೆ. ಹಮಾಲಿಗಳು, ಮೆಕ್ಯಾನಿಕ್, ಮನೆಗೆಲಸ, ಹೂ, ಬೀಡಿ ಕಟ್ಟುವವರು ಮೊದಲಾದ ಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರ ಜೀವನ ಕಷ್ಟಕರವಾಗಲಿದೆ ಎಂದು ಅಳಲು ತೋಡಿಕೊಂಡರು.
ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಇವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಂಘಟನೆ ಮುಖಂಡರಾದ ರಾಜಣ್ಣ, ಅವಿನಾಶ್, ಉಮಕಾಂತ್, ಮಧುಸೂಧನ, ರಮೇಶ್, ಮೋಹನ್, ಆಂಜನೇಯ, ತಿಪ್ಪೇಸ್ವಾಮಿ ಇತರರಿದ್ದರು.