ಜಿಲ್ಲೆ

ಪ್ರಧಾನಿ ಪ್ಯಾಕೇಜ್‌ಗೆ ಬಿಜೆಪಿ ಹರ್ಷ

Chitradurga

ಚಿತ್ರದುರ್ಗ: ಕರೊನಾ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಉತ್ತಮ ನಡೆ ಎಂದು ಬಿಜೆಪಿ ಪ್ರಮುಖರು ಹೇಳಿದ್ದಾರೆ.

ಇಂಥ ಸಂಕಷ್ಟ ಸನ್ನಿವೇಶದಲ್ಲೂ ಭಾರತದ ಆರ್ಥಿಕ ಸ್ವಾವಲಂಬನೆಯನ್ನು ಎತ್ತಿ ಹಿಡಿಯುವ ಸಲುವಾಗಿ ಕೇಂದ್ರದ ಈ ಪ್ಯಾಕೇಜ್ ದೇಶದ ಕೋಟ್ಯಂತರ ಕೃಷಿಕರು, ಕಾರ್ಮಿಕರು, ಬಡವರು ಹಾಗೂ ಉದ್ದಿಮೆ, ಕೈಗಾರಿಕೆ ಮೊದಲಾದ ವಲಯಗಳ ಅಭಿವೃದ್ಧಿಗೆ ಪೂರಕವಾಗಿದೆ.

ಕರೊನಾ ಸೋಂಕು ತಡೆ ನಿಟ್ಟಿನಲ್ಲೂ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕಾಲಕಾಲಕ್ಕೆ ಉತ್ತಮ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಪಕ್ಷದ ವಿಭಾಗೀಯ ಪ್ರಮುಖ ಜಿ.ಎಂ.ಸುರೇಶ್, ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್ ತಿಳಿಸಿದ್ದಾರೆ.