ಚಿತ್ರದುರ್ಗ: ಕರೊನಾ ವಿರುದ್ಧ ಹೋರಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಪ್ರತಿಯೊಬ್ಬರು ಏ.5ರಂದು ಪ್ರತಿಯೊಬ್ಬರು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಬೇಕು ಎಂದು ಕುಸ್ತಿ ಪಂದ್ಯಾವಳಿ ತೀರ್ಪುಗಾರ ಪೈಲ್ವಾನ್ ಭೈರಪ್ಪ ಮನವಿ ಮಾಡಿದ್ದಾರೆ.
ದೀಪ ಬೆಳಗುವುದರಿಂದ ಮನುಷ್ಯನಲ್ಲಿ ಆತ್ಮಶಕ್ತಿ ವೃದ್ಧಿಸುತ್ತದೆ. 9 ನಿಮಿಷಗಳ ಕಾಲ ಏಕಾಗ್ರತೆಯಿಂದ ದೀಪ ಬೆಳಗಿದರೆ ನಮ್ಮಿಂದ ಕರೊನಾ ಭೀತಿ ದೂರಗೊಳ್ಳಲಿದೆ. ಜತೆಗೆ ನಾವು ಮಾಡುವ ಕೆಲಸದಲ್ಲಿ ಏಕಾಗ್ರತೆ ಲಭಿಸುತ್ತದೆ. ನಾವೆಲ್ಲರೂ ಒಗ್ಗೂಡಿದ್ದೇವೆ ಎಂಬ ಸಂದೇಶವನ್ನು ನೀಡಲು ಸಹಕಾರಿ ಆಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.