ಜಿಲ್ಲೆ

ಚಿತ್ರದುರ್ಗ ಜಿಪಂ ಸಿಇಒ ಹೊನ್ನಾಂಬ

Chitradurga

ಚಿತ್ರದುರ್ಗ: ಕೆಎಎಸ್ ಉತ್ತೀರ್ಣ ಬಳಿಕ ಚಿತ್ರದುರ್ಗ ಜಿಲ್ಲೆಯಿಂದಲೇ ಪ್ರೊಬೇಷನರಿ ಉಪವಿಭಾಗಧಿಕಾರಿಯಾಗಿ ತಮ್ಮ ಸರ್ಕಾರಿ ಸೇವೆಯನ್ನು ಆರಂಭಿಸಿದ್ದ ಎಸ್.ಹೊನ್ನಾಂಬ, ಗುರುವಾರ ಜಿಪಂ ಸಿಇಒ ಆಗಿ ಅಧಿಕಾರ ಸ್ವೀಕರಿಸಿದರು.

ಸಿಇಒ ಹುದ್ದೆ ಪ್ರಭಾರದಲ್ಲಿದ್ದ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರು ಹೊನ್ನಾಂಬ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಎಂಎಸ್ಸಿ ಪದವೀಧರರಾದ ಹೊನ್ನಾಂಬ, 1999 ಬ್ಯಾಚ್ ಕೆಎಎಸ್ ಅಧಿಕಾರಿ. 2006-07ರಲ್ಲಿ ಇವರು ಚಿತ್ರದುರ್ಗದಿಂದ ತಮ್ಮ ಸರ್ಕಾರಿ ಸೇವೆಯನ್ನು ಆರಂಭಿಸಿದರು. ಬೆಳಗಾವಿ ಹಿಡಕಲ್ ಡ್ಯಾಂ ಆಡಳಿತಾಧಿಕಾರಿ, ರಾಜ್ಯ ಚುನಾವಣಾ ಆಯೋಗ ಹಾಗೂ ಕಂದಾಯ ಇಲಾಖೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

2018ರಲ್ಲಿ ಐಎಎಸ್‌ಗೆ ಬಡ್ತಿ ಪಡೆದ ಇವರು, ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ, ಸರ್ವಶಿಕ್ಷಾ ಅಭಿಯಾನ ನಿರ್ದೇಶಕರಾಗಿ, ಈಗ ಜಿಪಂ ಸಿಇಒ ಆಗಿ ನೇಮಕವಾಗುವ ಮುನ್ನ ರಾಜ್ಯ ವಿಪ್ಪತ್ತು ನಿರ್ವಹಣಾ ನಿರ್ದೇಶಕರಾಗಿದ್ದರು.

ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಪಂ ಅಧಿಕಾರಿ, ನೌಕರರ ಸಭೆ ನಡೆಸಿದರು. ಡಿಎಸ್ ಡಾ.ರಂಗಸ್ವಾಮಿ, ಸಿಎಒ ಓಂಕಾಂರಪ್ಪ, ಸಿಪಿಒ ಟಿ.ಶಶಿಧರ್ ಮೊದಲಾದ ಅಧಿಕಾರಿಗಳು ಇದ್ದರು.