ಜಿಲ್ಲೆ

ಭಸ್ಮಾಸುರ ಮೋಹಿನಿ ಯಕ್ಷಗಾನ

ಚಿತ್ರದುರ್ಗ: ನಗರದ ಲಾಸಿಕಾ ಫೌಂಡೇಶನ್ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ರೋಟರಿ ಬಾಲಭವನದಲ್ಲಿ ಮಾ.8ರ ಸಂಜೆ 6ಕ್ಕೆ ಶಿರಸಿಯ ಯಕ್ಷಗೆಜ್ಜೆ ಮಹಿಳಾ ಮತ್ತು ಮಕ್ಕಳ ತಂಡದಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗವನ್ನು ಆಯೋಜಿಸಿದೆ.

ಗಮಕ ಕಲಾಭಿಮಾನಿಗಳ ಸಂಘ, ಯಕ್ಷಾಭಿಮಾನಿಗಳ ಸಂಘ, ಹೋಟೆಲ್ಮಾಲೀಕರ ಸಂಘ, ರೋಟರಿ ಕ್ಲಬ್ ಹಾಗೂ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಅನಂತ್‌ಕೃಷ್ಣರ ಸಹಕಾರದೊಂದಿಗೆ ಆಯೋಜಿಸಿರುವ ಈ ಪ್ರಸಂಗದ ನೇತೃತ್ವವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ವಹಿಸಲಿದ್ದಾರೆಂದು ಲಾಸಿಕಾ ಫೌಂಡೇಶನ್‌ನ ಮಂಜುನಾಥ್ ಭಾಗವತ್ ತಿಳಿಸಿದ್ದಾರೆ.