ಚಿತ್ರದುರ್ಗ: ನಗರದ ಜನ ಜಾಗೃತಿ ಅಭಿಯಾನ ಫೆ.8ರಂದು ಬೆಳಗ್ಗೆ 11ಕ್ಕೆ ಪತ್ರಿಕಾ ಭವನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ,ನಾಗರಿಕರ ರಾಷ್ಟ್ರೀಯ ದಾಖಲೆ ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲೆ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಿದೆ.
ಸಾಹಿತಿ ಬಿ.ಎಲ್.ವೇಣು ಕಾರ‌್ಯಕ್ರಮ ಉದ್ಘಾಟಿಸಲಿದ್ದಾರೆ. ಎಐಡಿವೈಒ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹಾಗೂ ವಕೀಲ ಬಿ.ಕೆ.ರಹಮತ್‌ಉಲ್ಲಾ ಮಂಡಿಸಲಿದ್ದಾರೆ.
ಚಿಂತಕ ಜೆ.ಯಾದವ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆಂದು ಅಭಿಯಾನ ಪ್ರಮುಖರು ತಿಳಿಸಿದ್ದಾರೆ.