ಜಿಲ್ಲೆ

ಬಿಡಿ ರಸ್ತೆಯಲ್ಲಿ ಮಂದಿರ ತೆರವು

Chitradurga

ಚಿತ್ರದುರ್ಗ: ನಗರದ ಬಿಡಿ ರಸ್ತೆ ಎಲ್‌ಐಸಿ ಕಚೇರಿ ಎದುರಿನ ಸರ್ವಧರ್ಮ ಏಕತಾ ಮಂದಿರವನ್ನು ನಗರಸಭೆ ಸಿಬ್ಬಂದಿ ಶನಿವಾರ ಬೆಳಗ್ಗೆ ತೆರವುಗೊಳಿಸಿದರು.

ಬಿ.ಡಿ.ರಸ್ತೆಯಿಂದ ಪ್ರವಾಸಿ ಮಂದಿರದ ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ತೆರವಿಗೆ ತಹಸೀಲ್ದಾರ್, ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸರ್ವಧರ್ಮ ಏಕತಾ ಮಂದಿರ ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದು, ಈ ಸಂಬಂಧ ಎರಡು ತಿಂಗಳ ಹಿಂದೆಯೇ ನೋಟಿಸ್ ಕೊಡಲಾಗಿತ್ತು ಎಂದು ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ಹೇಳಿದರು.

ಕೋಟೆ ಪಿಐ ಪ್ರಕಾಶ್ ಮತ್ತಿತರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಬಂದೋಬಸ್ತ್‌ನಲ್ಲಿದ್ದರು.