ಚಿತ್ರದುರ್ಗ: ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಜೂ.21ರ ಬೆಳಗ್ಗೆ 8ರಿಂದ ಬಸವ ಯೋಗ (ಧ್ಯಾನ) ಹಮ್ಮಿಕೊಳ್ಳಲಾಗಿದೆ.
ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ವಿವಿಧ ಮಠಾಧೀಶರು, ಸರ್ವ ಸಮುದಾಯದ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ನಾಗರಿಕರು ಮನೆಯಲ್ಲೇ ಬಸವ ಯೋಗವನ್ನು ಮಾಡಬಹುದು. ಕಾರ್ಯಕ್ರಮದ ನೇರ ಪ್ರಸಾರ ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.