ಜಿಲ್ಲೆ

ಬಸ್ ನಿಲ್ದಾಣದ ತೆರವು ವಿರುದ್ಧ ಪ್ರತಿಭಟನೆ

ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆ 4ನೇ ಕ್ರಾಸ್ ಮುಖ್ಯರಸ್ತೆ ಬಳಿ ಬಸ್ ಪ್ರಯಾಣಿಕರ ತಂಗುದಾಣದ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್‌ಶೆಟ್ಟಿ ಬಣ) ಕಾರ್ಯಕರ್ತರು ಬುಧವಾರ ತಂಗುದಾಣವಿದ್ದ ಸ್ಥಳದಲ್ಲಿ ಪ್ರತಿಭಟಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ.ಮಹಾಂತೇಶ್,ಮುಖಂಡರಾದ ಓಬಳೇಶ್ ಯಾದವ್, ಭೀಮರಾಜ್, ವೆಂಕಟೇಶ್‌ರೆಡ್ಡಿ, ವಕೀಲ ಪ್ರಸನ್ನಕುಮಾರ್, ಷೇರ್‌ಆಲಿ, ರವಿ, ನಾಗರಾಜ್, ವೆಂಕಟೇಶ್, ಬಸವರಾಜ್, ರಂಜಿತ್‌ಗೌಡ ಮತ್ತಿತರರು ಇದ್ದರು.