ಚಿತ್ರದುರ್ಗ: ಬಿಜೆಪಿ ಜಿಲ್ಲಾ ಸಮಿತಿಗೆ ವಿವಿಧ ಪದಾಧಿಕಾರಿಗಳು ಹಾಗೂ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಪಿ.ಜಯಪಾಲಯ್ಯ, ಜಿ.ಟಿ.ಸುರೇಶ್ ಸಿದ್ದಾಪುರ, ರಾಜೇಶ್ ಬುರುಡೆಕಟ್ಟೆ, ಉಪಾಧ್ಯಕ್ಷರಾಗಿ ರಾಮದಾಸ್ ಬಾಳೆಕಾಯಿ, ಕೆ.ಎಸ್.ಕಲ್ಮಠ, ಮಂಜುಳಮ್ಮ, ಬಸವವರಾಜ್ ಅಗ್ರಹಾರ, ಪಾರ್ವತಮ್ಮ, ಚಂದ್ರಿಕಾ ಲೋಕನಾಥ್ ನೇಮಕವಾಗಿದ್ದಾರೆ.
ಕಾರ್ಯದರ್ಶಿಗಳಾಗಿ ರೂಪಾ ವಿನಯಕುಮಾರ್, ಬೋರಸ್ವಾಮಿ, ಜ್ಞಾನೇಶ್ವರಿ, ಎಚ್.ಬಿ.ರವಿಕುಮಾರ್, ಜಿ.ಎಚ್.ಮೋಹನ್ ಕುಮಾರ್, ಕೆ.ಸಿ.ಮಹೇಶ್ವರಪ, ಶಿವರಂಜಿನಿ, ಖಜಾಂಚಿಯಾಗಿ ಸಿ.ಎಸ್.ಪ್ರಸಾದ್, ಕಚೇರಿ ಕಾರ್ಯದರ್ಶಿಯಾಗಿ ಜಿ.ಎಸ್.ಶಂಭು.
ಮೋರ್ಚಾಗಳ ಜಿಲ್ಲಾ ಅಧ್ಯಕ್ಷರು: ಯುವ ಘಟಕ-ಬಿ.ಸಿ.ಹನುಮಂತೇಗೌಡ, ಮಹಿಳಾ-ಶೈಲಜಾ ರೆಡ್ಡಿ, ರೈತ-ಟಿ.ವೆಂಕಟೇಶ್ ಯಾದವ್, ಒಬಿಸಿ-ಕೆ.ಟಿ.ಪ್ರವೀಣ್ ಕುಮಾರ್, ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಬೋರನಾಯಕ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದ್ದಾರೆ.