ಜಿಲ್ಲೆ

ಫೆ.5ರಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ

Chitradurga

ಚಿತ್ರದುರ್ಗ: ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವರಣದಲ್ಲಿ ಫೆ.5ರಿಂದ 8ರ ವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿಸಲಾಗಿದೆ.

ರಾಜ್ಯಗಳ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತಿತರ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳು, ಕೃಷಿ ಪರಿಕರ, ರಸಗೊಬ್ಬರ ಹಾಗೂ ಸಸ್ಯಸಂರಕ್ಷಣಾ ವಸ್ತುಗಳ ತಯಾರಕರು, ಬಿತ್ತನೆ ಬೀಜ, ನರ್ಸರಿ ಗಿಡಗಳ ವಿತರಕರು, ನವೋದ್ಯಮಗಳು, ಬಿಪಿಡಿ ಪರವಾನಗಿದಾರರು, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಸ್ಥೆಗಳು ಮತ್ತು ರೈತರು ಮೇಳದಲ್ಲಿ ಭಾಗವಹಿಸುವರು.

ಹೆಚ್ಚಿನ ಮಾಹಿತಿಗೆ ಸಂಸ್ಥೆ ಆಯೋಜನೆ ಸಮಿತಿ ಅಧ್ಯಕ್ಷ ಡಾ.ಎಂ.ಆರ್.ದಿನೇಶ್ (080-23086100) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.