ಚಿತ್ರದುರ್ಗ: ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ಸಹಯೋಗದೊಂದಿಗೆ ಮಂಗಳವಾರ ತಮಟಕಲ್ಲು ಗ್ರಾಮದ ವೀರಗಲ್ಲಿನ ನೆಲೆಯನ್ನು ಎಸ್‌ಜೆಎಂ ಮಹಿಳಾ ವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.
ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹ ನಿರ್ದೇಶಕ ಪ್ರಹ್ಲಾದ್ ಮಾತನಾಡಿ, ಕರ್ನಾಟಕದಲ್ಲಿರುವ 30 ಸಾವಿರಕ್ಕೂ ಅಧಿಕ ಪಾರಂಪರಿಕ ಸ್ಮಾರಕಗಳು ನಮ್ಮ ಹೆಮ್ಮೆಯ ಪ್ರತೀಕವಾಗಿವೆ. ಜಿಲ್ಲೆಯಲ್ಲಿರುವ ಶಾಸನಗಳು, ಕೋಟೆ ಕೊತ್ತಲಗಳೆಡೆ ಆಸಕ್ತಿ ಬೆಳಸಿಕೊಂಡು, ಅವುಗಳನ್ನು ರಕ್ಷಿಸಬೇಕೆಂದರು.
ಕ್ಯಾಪ್ಟನ್ ಮಹೇಶ್ವರಪ್ಪ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷೆ ವನಿತಾ ಶಂಕರಮೂರ್ತಿ, ಪ್ರಭಾರ ಪ್ರಾಚಾರ‌್ಯ ಎಂ.ಎಸ್.ಪರಮೇಶ್ವರ್ ಮಾತನಾಡಿದರು. ಇತಿಹಾಸ ಮುಖ್ಯಸ್ಥ ಪ್ರೊ.ಟಿ.ಎನ್.ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲಸ್ವಾಮಿ ನಾಯಕ, ವಿಶ್ವನಾಥ್ ಮತ್ತಿತರರು ಇದ್ದರು.