ಜಿಲ್ಲೆ

ಪ್ರಾಣಿ, ಪಕ್ಷಿಗಳಿಗೆ ಆಹಾರ-ನೀರು

Chitradurga

ಚಿತ್ರದುರ್ಗ: ಲಾಕ್‌ಡೌನ್‌ನ ಸಂಕಷ್ಟದ ಸಮಯದಲ್ಲಿ ನಗರದಲ್ಲಿರುವ ಬಿಡಾಡಿ ಜಾನುವಾರು, ಕೋಟೆ, ಚಂದ್ರವಳ್ಳಿ ಮತ್ತಿತರ ತಾಣಗಳಲ್ಲಿರುವ ಕೋತಿಗಳು, ಅಳಿಲು ಹಾಗೂ ಪಕ್ಷಿಗಳಿಗೆ ನಗರಸಭೆ ಮಾಜಿ ಸದಸ್ಯ ಎಸ್‌ಬಿಎಲ್ ಮಲ್ಲಿಕಾರ್ಜುನ್ ನೇತೃತ್ವದ ನಾಲ್ವರ ತಂಡ ಕಳೆದ 20 ದಿನಗಳಿಂದ ಆಹಾರ, ನೀರು ಪೂರೈಸುವ ಕೆಲಸ ಮಾಡುತ್ತಿದೆ.

ತಂಡದ ಸದಸ್ಯರು ನಗರದಲ್ಲಿ 8ಕ್ಕೂ ಹೆಚ್ಚು ವಿವಿಧ ಮಂಡಿಗಳಿಂದ ಹಣ್ಣು, ತರಕಾರಿ, ಸೊಪ್ಪು ಸಂಗ್ರಹಿಸಿ ಸರಕು ಸಾಗಣೆ ವಾಹನದಲ್ಲಿ ತೆಗೆದುಕೊಂಡು ಹೋಗಿ ಪ್ರಾಣಿ ಪಕ್ಷಿಗಳ ಹಸಿವು, ಬಾಯಾರಿಕೆಯನ್ನು ನೀಗಿಸುತ್ತಿದ್ದಾರೆ.

ಇವರ ಸೇವೆಗೆ ಅಡ್ಡಿ ಆಗದಂತೆ ಜಿಲ್ಲಾಡಳಿತ ಪಾಸ್ ವಿತರಿಸಿ ಪ್ರೋತ್ಸಾಹ ನೀಡಿದೆ. ಪ್ರಾಣಿಪಕ್ಷಿಗಳಿಗೆ ಒದಗಿಸುತ್ತಿರುವ ಈ ಸೇವೆಗೆ ರಾಮಜ್ಜ, ಬುರುಜನಹಟ್ಟಿ ಮಹೇಶ್, ಪ್ರಕಾಶ್ ಇತರರು ಕೈ ಜೋಡಿಸಿದ್ದಾರೆ.