ಚಿತ್ರದುರ್ಗ: ಕರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ 580 ಪಡಿತರ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಬದಲು ಒಟಿಪಿ ಮೂಲಕ, ಪಡಿತರ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ಗುರುವಾರದಿಂದಲೇ ಬಯೊಮೆಟ್ರಿಕ್ ಬದಲು ಒಟಿಪಿ ವ್ಯವಸ್ಥೆ ಜಾರಿಯಾಗಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಮಧುಸೂದನ್ ಶುಕ್ರವಾರ ತಿಳಿಸಿದ್ದಾರೆ.
ಸದ್ಯಕ್ಕೆ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಅಕ್ಕಿ ಪ್ರಮಾಣದಲ್ಲಿ ಯಾವುದೇ ಕಡಿತಗೊಂಡಿಲ್ಲ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಿನ ರೇಷನ್ ಒಟ್ಟಿಗೆ ಏಪ್ರಿಲ್ ಮೊದಲೇ ವಿತರಿಸುವ ಸಾಧ್ಯತೆ ಇದೆ.