ಜಿಲ್ಲೆ

ಕೃತಜ್ಞತೆ ಅಭಿಯಾನ ವಿಡಿಯೊ ಬಿಡುಗಡೆ

Chitradurga

ಚಿತ್ರದುರ್ಗ: ಕರೊನಾ ವಿರುದ್ಧ ಹೋರಾಡುತ್ತಿರುವ ಸಮಸ್ತ ಸರ್ಕಾರಿ ನೌಕರರಿಗೆ ಕೃತಜ್ಞತೆ ಸಲ್ಲಿಸುವ ವಿಡಿಯೋ ಅಭಿಯಾನದ ತುಣುಕನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗುರುವಾರ ಯುಟೂಬ್‌ಗೆ ಅಪ್‌ಲೋಡ್ ಮೂಲಕ ಚಾಲನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಂಕು ಹತೋಟಿಗೆ ತೆಗೆದುಕೊಂಡಿರುವ ದಿಟ್ಟ ಕ್ರಮಗಳನ್ನು ಸ್ವಾಗತಿಸುವುದಾಗಿ ಹೇಳಿದರು.

ಬಳಿಕ ಮಾತನಾಡಿ, ಲಾಕ್‌ಡೌನ್ ಆದಾಗಿನಿಂದಲೂ ಜೀವದ ಹಂಗು ತೊರೆದು ಎಲ್ಲರ ಶ್ರಮವನ್ನು ಶ್ಲಾಘಿಸಿದರು.

ಜಿಪಂ ಮಾಜಿ ಸದಸ್ಯ ಜಯಪಾಲಯ್ಯ, ಜಿ.ತಿಪ್ಪೇಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಕೆ.ಮಂಜುನಾಥ್, ಜೆ.ರಾಘವೇಂದ್ರ, ಆರ್.ಶ್ರೀನಿವಾಸ್, ಜಿ.ಆರ್.ಪ್ರದೀಪ್ ಕುಮಾರ್ ಇತರರಿದ್ದರು.