ಚಿಟಗುಪ್ಪ ಪಟ್ಟಣದಲ್ಲಿ ಗುರುವಾರ ನೂತನವಾಗಿ ಆಯ್ಕೆಯಾದ ಪುರಸಭೆ ಅಧ್ಯಕ್ಷೆ ರೋಜಮ್ಮ ತಿಪ್ಪಣ್ಣ ಹಾಗೂ ಉಪಾಧ್ಯಕ್ಷೆ ಮೀರ್‌ಮುಜಾಫರ್ ಅಲಿ ಪಟೇಲ್ ಅವರನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್ ಸನ್ಮಾನಿಸಿದರು. ಎಂಎಲ್ಸಿ ಭೀಮರಾವ ಪಾಟೀಲ್, ವೀರಣ್ಣ ಪಾಟೀಲ್, ಅಭಿಷೇಕ್ ಪಾಟೀಲ್, ದಿಲೀಪ್ ಬಗದಲಕರ್, ಅಶೋಕ ಸ್ವಾಮಿ ಇತರರಿದ್ದರು. 
ಜಿಲ್ಲೆ

ಕಾಂಗ್ರೆಸ್ ತೆಕ್ಕೆಗೆ ಚಿಟಗುಪ್ಪ ಪುರಸಭೆ

ರಾಜು ಯಮಕನಮರಡಿ

ಚಿಟಗುಪ್ಪ: ಚಿಟಗುಪ್ಪ ಪುರಸಭೆಯ ಎರಡನೇ ಅವಧಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಆಡಳಿತ ಚುಕ್ಕಾಣಿ ಹಿಡಿದಿದ್ದು, ಅಧ್ಯಕ್ಷರಾಗಿ ರೋಜಮ್ಮ ತಿಪ್ಪಣ್ಣ ಹಾಗೂ ಉಪಾಧ್ಯಕ್ಷರಾಗಿ ಮೀರ್‌ಮುಜಾಫರ್ ಅಲಿ ಪಟೇಲ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ರೋಜಮ್ಮ ತಿಪ್ಪಣ್ಣ ಹಾಗೂ ಬಿಜೆಪಿಯ ಪದ್ಮಾವತಿ ನಾಮಪತ್ರ ಸಲ್ಲಿಸಿದರು. ಪದ್ಮಾವತಿ ಅವರು ರೋಜಮ್ಮ ಅವರ ಮೀಸಲಾತಿ ಸಂಬಂಧ ನಾಮಪತ್ರ ತಿರಸ್ಕರಿಸಬೇಕು ಎಂದು ಪದ್ಮಾವತಿ ದೂರು ನೀಡಿದರು. ಚುನಾವಣೆ ಅಧಿಕಾರಿ ಮಾನ್ಯತೆ ಮಾಡಿದಿರುವುದರಿಂದ ಬಿಜೆಪಿ ಸದಸ್ಯರು ಚುನಾವಣೆ ಬಹಿಷ್ಕರಿಸಿ ಹೊರಹೊದರು. ಸಭೆಯಲ್ಲಿದ್ದ ೧೮ ಸದಸ್ಯರ ಪೈಕಿ ಕಾಂಗ್ರೆಸ್‌ನ ರೋಜಮ್ಮ ೧೬ ಮತ ಜಯಗಳಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಮೀರ್‌ಮುಜಾಫರ್ ಅಲಿ ಪಟೇಲ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ತಹಸೀಲ್ದಾರ್ ಮಂಜುನಾಥ ಪಾಂಚಾಳ ಚುನಾವಣಾಧಿಕಾರಿ ಚುನಾವಣೆ ಪ್ರಕ್ರಿಯೆ ನಡೆಸಿ ಕೊಟ್ಟರು. ಪುರಸಭೆ ಮುಖ್ಯಾಧಿಕಾರಿ ಬಾಬಾ ಹುಸಾಮೊದ್ದೀನ್ ಇತರರಿದ್ದರು. ಅಧ್ಯಕ್ಷ ಸ್ಥಾನ ಬಿಸಿಬಿ ಹಾಗೂ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

೨೩ ಸದಸ್ಯರ ಬಲದ ಪುರಸಭೆಯಲ್ಲಿ ಕಾಂಗ್ರೆಸ್ ೧೩, ಬಿಜೆಪಿ ೬, ಜೆಡಿಎಸ್ ೩ ಹಾಗೂ ಬಿಎಸ್‌ಪಿ ೧ ಸದಸ್ಯರಿದ್ದಾರೆ. ಅದರಲ್ಲಿ ಬಿಜೆಪಿ ಕ್ರೀಸ್ತಾನಂದ ಹಾಗೂ ಬಿಎಸ್‌ಪಿಯ ರಾಜದೀಪ ಜಾಬಾ ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪುರಸಭೆ ಹೊರಭಾಗದಿಂದ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಯಲ್ಲಿ ಭವ್ಯ ಮರವಣಿಗೆ ಮೂಲಕ ವಿಜಯೋತ್ಸವ ನಡೆಯಿತು. ಸಂಸದ ಸಾಗರ್ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ್, ಎಂಎಲ್ಸಿ ಭೀಮರಾವ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್, ಪ್ರಮುಖರಾದ ವೀರಣ್ಣ ಪಾಟೀಲ್, ದಿಲೀಪ್ ಬಗದಲಕರ್, ಅಶೋಕ ಸ್ವಾಮಿ ಇತರರಿದ್ದರು.

ಕೆಲಕಾಲ ಗೊಂದಲ: ಪುರಸಭೆ ಆವರಣದ ಹೊರಗಡೆ ದ್ವಾರದ ಎದುರುಗಡೆ ಚುನಾವಣೆ ಮುಗಿಯುವ ಸಮಯದಲ್ಲಿ ಜಮಾಯಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಎದುರಾದಾಗ ಘೋಣೆಗಳಿಂದ ಕೆಲ ಕ್ಷಣ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ನಂತರ ಎಲ್ಲವೂ ಶಾಂತಗೊಂಡಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ನಾಮಪತ್ರ ತಿರಸ್ಕೃರಿಸಲು ಬಿಜೆಪಿ ದೂರು: ರೋಜಮ್ಮ ಅವರು ಪರಿಶಿಷ್ಟ ಜಾತಿ (ಮಾದಿಗ) ಸಮುದಾಯಕ್ಕೆ ಸೇರಿದ್ದಾರೆ. ೨೦೨೦ರಲ್ಲಿ ತಹಸೀಲ್ದಾರ್ ಅವರಿಂದ ಪರಿಶಿಷ್ಟ ಜಾತಿ (ಮಾದಿಗ) ಪ್ರಮಾಣ ಪತ್ರ ಪಡೆದಿದ್ದಾರೆ. ಆದರೆ ಇದೀಗ ಪುರಸಭೆ ಅಧ್ಯಕ್ಷರ ಚುನಾವಣೆಯ ಪ್ರಯುಕ್ತ ರೋಜಮ್ಮ ೨೦೨೪ರ ಆ.೭ರಂದು ಪ್ರವರ್ಗ ೩ (ಬಿ) ರಲ್ಲಿ ಬರುವ ಕ್ರಿಶ್ಚನ್ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಈ ವಿಷಯವನ್ನು ಮುಂದಿಟ್ಟುಕೊAಡು ಬಿಜೆಪಿ ನಾಮಪತ್ರ ಸಲ್ಲಿಸಲು ದೂರು ಸಲ್ಲಿಸಿತ್ತು. ಮೂಲತಃ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನ ಪ್ರವರ್ಗ ೩ (ಬಿ) ಮೀಸಲಾತಿ ಇರುವ ಕಾರಣ ರೋಜಮ್ಮ ಸಲ್ಲಿಸಿರುವ ನಾಮಪತ್ರ ತಿಸ್ಕರಿಸುವಂತೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಿಜೆಪಿ ಪದ್ಮಾವತಿ ಚಂದ್ರಕಾಂತ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಚುನಾವಣಾಧಿಕಾರ ಕ್ರಮಕ್ಕೆ ಬಿಜೆಪಿ ಖಂಡಿಸಿದೆ. ಬಿಜೆಪಿ ಮಂಡಲ ಅಧ್ಯಕ್ಷ ಅನೀಲ ಪಸರ್ಗಿ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್, ಸಂತೋಷ ಪಾಟೀಲ್, ಸುಭಾಷ ಕುಂಬಾರ, ರಮೇಶ ಕಲ್ಲೂರ, ಅಮಿತ್ ತೊಗಲೂರು, ನಟವರಸಿಂಗ್ ಪವಾರ್, ಶುಭಂ ರಂಗದಾಳ, ಗೋಪಿ ಮೋಹಳೆ, ಸುನೀಲ್ ಪತ್ರಿ, ಅನೀಲ ಜೋಶಿ ಇತರರಿದ್ದರು.

ನೂತನವಾಗಿ ಆಯ್ಕೆಗೊಂಡಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು. ಕಾಂಗ್ರೆಸ್ ಸಾಮಾಜಿಕ ನ್ಯಾಯ ಒದಗಿಸಿಕೊಡುತ್ತದೆ. ಅದರಂತೆ ಇಲ್ಲಿ ಎಲ್ಲರ ಒಮ್ಮತದ ಮೇರೆಗೆ ಮಹಿಳೆಗೆ ಅಧ್ಯಕ್ಷೆ ಮಾಡಲಾಗಿದೆ.
| ರಾಜಶೇಖರ ಪಾಟೀಲ್​ ಮಾಜಿ ಸಚಿವ