ಸಿಂಧನೂರು ತಾಲೂಕಿನ ಚಿರತನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಸ್ಪರ್ಧೆ ಮಾಸಾಚರಣೆ ಕಾರ್ಯಕ್ರಮವನ್ನು ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್ ವಿ. ಉದ್ಘಾಟಿಸಿದರು. ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಶಾಂತರಾಜ, ಶಂಕರದೇವರು ಹಿರೇಮಠ, ಶ್ರೀಶೈಲ್ ಕೌದಿ, ಬಿ.ಬಿ.ಮುಲ್ಲಾ, ಶಿಕ್ಷಕಿಯರಾದ ಯಲ್ಲಮ್ಮ, ಸುಷ್ಮಾ, ದೇವರಗುಡಿ ಗ್ರಾಪಂ ಉದ್ಯೋಗಿ ಅಮರೇಶ ಇದ್ದರು. 
ಜಿಲ್ಲೆ

ಗಣಿತ ಸ್ಪರ್ಧೆಯಿಂದ ಹೆಚ್ಚಲಿದೆ ವಿಶ್ವಾಸ

ಸಿಂಧನೂರು: ಗಣಿತ ಸ್ಪರ್ಧೆ ವಿದ್ಯಾರ್ಥಿಗಳ ಲ್ಲಿ ಸ್ಪರ್ಧಾ ಮನೋಭಾವ ಮೂಡಿಸುವುದರೊಂದಿಗೆ ಕಾರ್ಯಕ್ಷಮತೆ ಹೆಚ್ಚಿಸಲಿ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್ ವಿ. ಹೇಳಿದರು.

ಕಾರ್ಯಕ್ಷಮತೆ ಹೆಚ್ಚಿಸಲಿ

ಚಿರತನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವರಗುಡಿ ಗ್ರಾಪಂ, ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಮಕ್ಕಳ ಗಣಿತ ಸ್ಪರ್ಧೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಯಲ್ಲಿ ಭಾಗವಹಿಸುವುದರಿಂದ ಅವರಲ್ಲಿರುವ ಪರೀಕ್ಷಾ ಭಯ ದೂರವಾಗಲಿದೆ. ಪರೀಕ್ಷೆ ಎದುರಿಸುವ ಧೈರ್ಯ, ವಿಶ್ವಾಸ ಹೆಚ್ಚಿಸಲಿದೆ ಎಂದು ತಿಳಿಸಿದರು.

ದೇವಿಕ್ಯಾಂಪ್ ವಲಯದ ಆರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಗಣಿತ ಸ್ಪರ್ಧೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.