ಜಿಲ್ಲೆ

ವಿದ್ಯಾಪೋಷಕದಿಂದ ಚಿಣ್ಣರ ಹಬ್ಬ

ಮಂಜುನಾಥ ಅಂಗಡಿ

ಧಾರವಾಡ: ನಗರದ ವಿದ್ಯಾಪೋಷಕ ಸಂಸ್ಥೆಯು ಮಕ್ಕಳ ದಿನಾಚರಣೆಯ ಅಂಗವಾಗಿ ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಇಲ್ಲಿನ ಗುರುಭವನದಲ್ಲಿ ಇತ್ತೀಚೆಗೆ ಚಿಣ್ಣರ ಹಬ್ಬ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ 8 ಸರ್ಕಾರಿ ಶಾಲೆಗಳಿಂದ 96 ವಿದ್ಯಾರ್ಥಿಗಳು ಕಸದಿಂದ ರಸ, ಭಿತ್ತಿಪತ್ರಗಳ ಪ್ರದರ್ಶನ ಹಾಗೂ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಿತ್ತಿಪತ್ರಗಳ ಪ್ರದರ್ಶನದಲ್ಲಿ ಸೌಮ್ಯ ಪಾಟೀಲ, ನಮೃತಾ ನಲವಡಿ ಹಾಗೂ ಮೇಘಾ ತಡಕೋಡ, ಶ್ರದ್ಧಾ ಸತ್ಯಣ್ಣವರ, ಕಸದಿಂದ ರಸ ಸ್ಪರ್ಧೆಯಲ್ಲಿ ಅಕುಂಶ ಭಜಂತ್ರಿ ಹಾಗೂ ಪ್ರದೀಪ ದೊಡಮನಿ ಮತ್ತು ನೃತ್ಯ ಸ್ಪರ್ಧೆಯಲ್ಲಿ ಹೆಬ್ಬಳ್ಳಿ, ಕೊಟಬಾಗಿ ಹಾಗೂ ಪುಡಕಲಕಟ್ಟಿ ಶಾಲೆಯ ವಿದ್ಯಾರ್ಥಿಗಳು ಅನುಕ್ರಮ ಸ್ಥಾನ ಪಡೆದರು.
ವಿಜೇತರಿಗೆ ವಸುಂಧರಾ ದೇಶಪಾಂಡೆ, ಪ್ರಭಾಕರ ದೇಶಪಾಂಡೆ, ವೀರನಗೌಡ ಮರಿಗೌಡ್ರ ಪ್ರಶಸ್ತಿ ವಿತರಿಸಿದರು. ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಕಿಟ್‌ಗಳನ್ನು ವಿತರಿಸಲಾಯಿತು.
ರತ್ನಾ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮಿತಾ ಹೆಗೆಡೆ ಸ್ವಾಗತಿಸಿದರು. ರೂಪಾ ಗಡೇಕರ ವಂದಿಸಿದರು. ಸಾವಿತ್ರಿ ಹೂಗಾರ ಹಾಗೂ ಸಾಯಿಗೀತಾ ನಾಯ್ಕ ನಿರೂಪಿಸಿದರು.