Oplus_131072 
ಜಿಲ್ಲೆ

ಚಿಣ್ಣರ ನಲಿಕಲಿ ಬೇಸಿಗೆ ಶಿಬಿರ ಸಮಾರೋಪ

Mysuru - Desk - Naveen Kumar H P

ಕೊಡಗು : ಪಟ್ಟಣದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಚಿಣ್ಣರ ನಲಿಕಲಿ ಉಚಿತ ಬೇಸಿಗೆ ಶಿಬಿರವು ಇತ್ತೀಚೆಗೆ ಮುಕ್ತಾಯಗೊಂಡಿತು.
ಸುಮಾರು 25 ದಿನಗಳ ಕಾಲ ಆಯೋಜಿಸಿದ್ದ ಈ ಶಿಬಿರದಲ್ಲಿ ಮಕ್ಕಳಿಗೆ ಯೋಗ, ಕರಾಟೆ, ಕ್ರೀಡೆ, ಕಂಪ್ಯೂಟರ್ ಕಲಿಕೆ, ಡಾನ್ಸ್, ಮ್ಯೂಸಿಕ್, ದೈಹಿಕ ಶಿಕ್ಷಣ ಸೇರಿದಂತೆ ಇನ್ನಿತರ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಯಿತು. ಸಮಾರೋಪದ ದಿನದಂದು ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ವೃದ್ಧಾಶ್ರಮದ ಹಿರಿಯರನ್ನು ಶಾಲೆಗೆ ಆಹ್ವಾನಿಸಲಾಗಿತ್ತು. ಶಾಲಾ ಮಕ್ಕಳಿಂದ ಆಯೋಜಿಸಿದ್ದ ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಿರಿಯರನ್ನು ರಂಜಿಸಿತು.ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಸಮಾಜಸೇವಕಿ ಪೂಜಾ ರವೀಂದ್ರ ಹಿರಿಯರನ್ನು ಸನ್ಮಾನಿಸಿದಲ್ಲದೆ, ಅಕಾಡೆಮಿ ವತಿಯಿಂದ ಹೆಗ್ಗಳ ವೃದ್ಧಾಶ್ರಮಕ್ಕೆ ಏರ್ ಕೂಲರ್ ಕೊಡುಗೆಯಾಗಿ ನೀಡಿದರು. ನಂತರ ಶಾಲಾ ಮಕ್ಕಳನ್ನು ಹೆಗ್ಗಳದ ಗೋಲ್ಡನ್ ಬೀನ್ ರೆಸಾರ್ಟ್‌ಗೆ ಕ್ಷೇತ್ರ ಭೇಟಿಗಾಗಿ ಕರೆದೊಯ್ಯಲಾಯಿತು. ಅಕಾಡೆಮಿ ಕಾರ್ಯದರ್ಶಿ ಪ್ರತಿಮಾ ರಂಜನ್, ಶಿಕ್ಷಕರು, ಸಿಬ್ಬಂದಿ, ವೃದ್ಧಾಶ್ರಮದ ಸಿಬ್ಬಂದಿ ಇದ್ದರು.