ಚಿಂಚೋಳಿ: ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ ದಸರಾ ಕ್ರೀಡಾಕೂಟದಲ್ಲಿ ಜವಾಹರ ನಗರ ತಾಂಡಾದ ಗೇಮುಸಿಂಗ ರಾಠೋಡ ತಂಡದ ಯುವಕರು ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕ್ರೀಡಾ ಅಧಿಕಾರಿ ಮಲ್ಲಿಕಾರ್ಜುನ ನೆಲ್ಲಿ ತಿಳಿಸಿದ್ದಾರೆ.
ಗೆಲುವು ಸಾಧಿಸಿದ ತಂಡಕ್ಕೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ವೇಳೆ ಕ್ರೀಡಾಪಟುಗಳಾದ ಗೋವಿಂದ ರಾಠೋಡ, ಅರವಿಂದ, ರಾಹುಲ್, ಮಾಹಂತೇಶ, ವೆಂಕಟೇಶ, ಕೀಶನ, ಹೇಮಾ ನಾಯಕ, ವಿಶಾಲ, ಚಂದರ, ದಾರಾಸಿಂಗ್, ಜಗನ್ನಾಥ ಸೇರಿದಂತೆ ಅನೇಕರು ಇದ್ದರು.