ಜಿಲ್ಲೆ

ಚಿಂಚೋಳಿ: ಅಣವಾರದಲ್ಲಿ ದುರ್ಗಾದೇವಿಗೆ ಕುಂಕುಮಾರ್ಚನೆ ಭಾನುವಾರ

ಕೃಷ್ಣ ಕುಲಕರ್ಣಿ

ಚಿಂಚೋಳಿ: ‌ತಾಲೂಕಿನ ಅಣವಾರ ಗ್ರಾಮದಲ್ಲಿ ದಸರಾ ನವರಾತ್ರಿ ಉತ್ಸವ ಅಂಗವಾಗಿ ಭಾನುವಾರ ಬೆಳಿಗ್ಗೆ 5ಕ್ಕೆ ಶ್ರೀ ದುರ್ಗಾದೇವಿಗೆ ಕುಂಕುಮ ಅರ್ಚನ ವಿಶೇಷ ಪೂಜೆ ಜರುಗಲಿದೆ.

ಬೆಳಗ್ಗೆ 11 ಗಂಟೆಗೆ ದುರ್ಗಾಷ್ಟಮಿ ಪ್ರಯುಕ್ತ ಸರ್ವ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ ದುರ್ಗಾ ದೇವಿಯ ಎಲ್ಲಾ ಸದ್ಭಕ್ತಾದಿಗಳು ಉಡಿ ತುಂಬುವ ಕಾರ್ಯಕ್ರಮಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಈ ಕಾರ್ಯಕ್ರಮವನ್ನು ಬಹು ವಿಜೃಂಭಣೆಯಿಂದ ನಡೆಸಿಕೊಡಬೇಕೆಂದು ಸಿದ್ದಯ್ಯ ಸ್ವಾಮಿ ಅಣವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.